ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ – ಅಪ್ರಾಪ್ತನಿಂದ ವ್ಯಕ್ತಿಯ ಕೊಲೆ

1 Min Read

ಚಿತ್ರದುರ್ಗ: ಎರಡು ಕುಟುಂಬದ ಮಧ್ಯೆ ಆಸ್ತಿ ವೈಷಮ್ಯ (Property Dispute) ಹಿನ್ನೆಲೆ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ನಡೆದಿದೆ.

ವೀರಭದ್ರಪ್ಪ (55) ಕೊಲೆಯಾದ ದುರ್ದೈವಿ. 16 ವರ್ಷದ ಅಪ್ರಾಪ್ತ ಈ ಕೃತ್ಯ ನಡೆಸಿದ್ದಾನೆ. ದೊಡ್ಡಾಲಘಟ್ಟದಿಂದ ಜಮೀನಿಗೆ ಹೋಗುವ ರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ. ಇದನ್ನೂ ಓದಿ: KSOU ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ – ಸರ್ಕಾರಕ್ಕೆ ಪತ್ರ ಬರೆದು ವಿವಿ ಕುಲಪತಿಗಳಿಂದ ಸ್ಪಷ್ಟನೆ

ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ವ್ಯವಸ್ಥಿತ ಕೊಲೆ – ಬೆಂಗಳೂರಲ್ಲಿ ಝೀರೋ ಎಫ್‌ಐಆರ್‌ ದಾಖಲು

Share This Article