ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

1 Min Read

ಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ (Gold Price) ಈಗ ಪಾತಾಳಕ್ಕೆ ಕುಸಿಯುತ್ತಿದ್ದು, 1 ಲಕ್ಷ ರೂ. ಸನಿಹಕ್ಕೆ ಬರುವಹಾಗಿದೆ.

ಹೌದು. ವಾರ್ ಎಫೆಕ್ಟ್ (War Effect) ಗಗನಕ್ಕೇರಿದ ಚಿನ್ನ ಈಗ ಪಾತಾಳಕ್ಕೆ ಕುಸಿದಿದೆ. ಚಿನ್ನದ ದರ ಕುಸಿತವು ಹೆಂಗಳೆಯರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. 10 ಗ್ರಾಂ ಗೆ ಯುದ್ಧದ ಪರಿಣಾಮದಿಂದ 30 ಸಾವಿರ ರೂ. ವರೆಗೆ ಇದ್ದ 24 ಕ್ಯಾರೆಟ್ ಚಿನ್ನದ ದರ ಕೊಂಚ ಇಳಿಕೆ ಕಂಡಿದ್ದರೆ, 22 ಕ್ಯಾರೆಟ್ ಚಿನ್ನವೂ 25 ಸಾವಿರದಷ್ಟು ಇಳಿಕೆಯಾಗಿದೆ. ಇದನ್ನೂ ಓದಿ: ಟ್ರಂಪ್‌ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್‌ – ಇನ್‌ಸೈಡರ್‌ ಟ್ರೇಡಿಂಗ್‌ ಮಾಡಿದ್ಯಾರು?

ಚಿನ್ನದ ದರ ಇಂದು ಎಷ್ಟು ಇಳಿಕೆ‌?
* 22 ಕ್ಯಾರೆಟ್‌ ಚಿನ್ನ 10 ಗ್ರಾಂಗೆ ಇಂದು 2,700 ರೂ ಇಳಿಕೆ, 1 ಗ್ರಾಂ ಗೆ 270 ರೂ. ಇಳಿಕೆ
* 24 ಕ್ಯಾರೆಟ್ 10 ಗ್ರಾಂಗೆ 2,940 ರೂ. ಇಳಿಕೆ, 1 ಗ್ರಾಂಗೆ 294 ರೂ ಇಳಿಕೆ.
* 22 ಕ್ಯಾರೆಟ್‌ ಚಿನ್ನದ ದರ 1,28,650 ರೂ
* 24 ಕ್ಯಾರೆಟ್ ಚಿನ್ನದ ದರ 1,40,0350 ರೂ.ಗೆ ಬಂದಿದೆ.

Share This Article