ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳಿಗೆ 18 ಕೋಟಿ ರೂ. ಶುಲ್ಕ – ಯುದ್ಧದ ಖರ್ಚು ನಿಭಾಯಿಸಲು ಇರಾನ್‌ ಹೊಸ ಪ್ಲ್ಯಾನ್‌

1 Min Read

ಟೆಹ್ರಾನ್: ಯುದ್ಧದ ಖರ್ಚು ನಿಭಾಯಿಸಲು ಇರಾನ್‌ ಹೊಸ ಆದಾಯದ ಮೂಲ ಕಂಡುಕೊಂಡಿದೆ. ಹಾರ್ಮುಜ್‌ ಜಲಸಂಧಿಯಲ್ಲಿ ಸಂಚರಿಸುವ ವ್ಯಾಪಾರಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್‌ ನಿರ್ಧರಿಸಿದೆ.

ಹಾರ್ಮುಜ್‌ ಜಲಸಂಧಿ ಮೂಲಕ ಹಾದುಹೋಗುವ ವ್ಯಾಪಾರಿ ಹಡಗುಗಳಿಗೆ ಇರಾನ್‌ 2 ಮಿಲಿಯನ್‌ ಡಾಲರ್‌ (ಅಂದಾಜು 18.77 ಕೋಟಿ ರೂಪಾಯಿ) ಶುಲ್ಕ ವಿಧಿಸುತ್ತಿದೆ. ಈ ಬಗ್ಗೆ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಸಮಿತಿಯ ಸದಸ್ಯರಾದ ಅಲಾಯೆದ್ದೀನ್ ಬೊರೊಜೆರ್ಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುದ್ಧದ ಖರ್ಚುಗಳನ್ನು ನಿಭಾಯಿಸಲು ಈ ಮಾರ್ಗದಲ್ಲಿ ಸಂಚರಿಸುವ ವ್ಯಾಪಾರಿಗಳ ಮೇಲೆ ಶುಲ್ಕ ಹೇರಲಾಗುತ್ತಿದೆ. ಸಂಚಾರಕ್ಕೆ ಅನುಮತಿ ನೀಡಲು ವ್ಯಾಪಾರಿ ಹಡಗುಗಳು ಶುಲ್ಕ ಭರಿಸಬೇಕಿದೆ.

48 ಗಂಟೆಗಳ ಒಳಗೆ ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ, ಅಮೆರಿಕವು ಇರಾನ್‌ನ ವಿದ್ಯುತ್ ಮೂಲಸೌಕರ್ಯವನ್ನು ನಾಶ ಮಾಡುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ಇರಾನ್‌ ಈ ಕ್ರಮಕೈಗೊಂಡಿದೆ. ಇರಾನ್‌ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ಜಲಸಂಧಿಯನ್ನು ಸಂಪೂರ್ಣ ಬಂದ್‌ ಮಾಡಲಾಗುವುದು ಎಂದು ಇರಾನ್‌ ಕೌಂಟರ್‌ ಕೊಟ್ಟಿದೆ.

Share This Article