ಮಂಗಳೂರು: ಚೀನಾಕ್ಕೆ (China) ತೆರಳುತ್ತಿದ್ದ ರಷ್ಯಾದ (Russia) ಕಚ್ಚಾ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್ ಹೊಡೆದು ಮಂಗಳೂರಿನತ್ತ (Mangaluru) ಬರುತ್ತಿದೆ. 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲವಿರುವ ಹಡಗು ನವಮಂಗಳೂರಿಗೆ ಆಗಮಿಸಲಿದೆ.
ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ 18 ರಂದು ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್ (Aqua Titan) ಹಡಗಿಗೆ ಲೋಡ್ ಮಾಡಲಾಗಿತ್ತು. ಈಗ ಈ ಹಡಗು ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್ ಹೊಡೆದಿದೆ. ಮಾರ್ಚ್ 22 ರಂದು ಭಾರತದ ನವಮಂಗಳೂರಿಗೆ ಆಗಮಿಸಲಿದ್ದು, ಎಂಆರ್‌ಪಿಎಲ್‌ಗೆ ಆಳ ಸಮುದ್ರದಲ್ಲಿರುವ ಪೈಪ್ ಲೈನ್ ಮೂಲಕ ತೈಲ ಪೂರಕೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ…

