ಪತಿಯನ್ನ ಅರೆಸ್ಟ್ ಮಾಡಿ ಪತ್ನಿಯನ್ನ ಮಂಚಕ್ಕೆ ಕರೀತಿದ್ದ ಕೇಸ್ –  ಇನ್ಸ್‌ಪೆಕ್ಟರ್‌ ಸಂದೇಶ್ ಸಸ್ಪೆಂಡ್

2 Min Read

ಮಂಗಳೂರು: ಪತಿಯನ್ನು ಸುಳ್ಳು ಕೇಸ್‌ನಲ್ಲಿ ಬಂಧಿಸಿ, ಆತನನ್ನು ಬಿಡಿಸಬೇಕಾದ್ರೆ ಲೈಂಗಿಕ ಸಂಪರ್ಕಕ್ಕೆ ಬರಬೇಕು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದ ಕೇಸ್ ಬೆನ್ನಲ್ಲೇ ಇದೀಗ ಇನ್ಸ್‌ಪೆಕ್ಟರ್‌ ಸಂದೇಶರನ್ನು ಸಸ್ಪೆಂಡ್ ಮಾಡಲಾಗಿದೆ.

ಸಂತ್ರಸ್ತೆಯೊಬ್ಬರು ಪತಿಯನ್ನು ಸುಳ್ಳು ಕೇಸ್‌ನಲ್ಲಿ ಬಂಧಿಸಿ, ಆತನನ್ನು ಬಿಡಿಸಬೇಕಾದ್ರೆ ಲೈಂಗಿಕ ಸಂಪರ್ಕಕ್ಕೆ ಬರಬೇಕು ಅಂತ ಇನ್ಸ್‌ಪೆಕ್ಟರ್‌ ಸಂದೇಶ್ ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ ಅಂತ ಗೃಹ ಸಚಿವ ಪರಮೇಶ್ವರ್‌ಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಸಂದೇಶ್ ಪೋಸ್ಟಿಂಗ್‌ಗಾಗಿ 50 ಲಕ್ಷ ರೂ. ಕೊಟ್ಟಿದ್ದೇನೆ. ನೀನು ಸಹಕರಿಸದಿದ್ರೆ 25 ಲಕ್ಷ ರೂ. ಕೊಡು ಅಂತ ಡಿಮ್ಯಾಂಡ್ ಮಾಡ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಗಂಡನನ್ನು ಅರೆಸ್ಟ್‌ ಮಾಡಿ ಹೆಂಡತಿನ ಮಂಚಕ್ಕೆ ಕರಿತಿದ್ದ ಇನ್ಸ್‌ಪೆಕ್ಟರ್‌ – ನೊಂದ ಮಹಿಳೆಯಿಂದ ಸಿಎಂಗೆ ದೂರು

ಈ ಆರೋಪ ಮಾಡಿರುವ ಸಂತ್ರಸ್ತೆ ವಿರುದ್ಧ ಆಕೆಯ ಸಹೋದರಿ ಗಂಭೀರ ಆರೋಪ ಮಾಡಿದ್ದಾರೆ. ಆಕೆ ನಮ್ಮ ಮಾನ ಮರ್ಯಾದೆ ತೆಗಿದಿದ್ದಾಳೆ. ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಆಕೆಯ ವಿರುದ್ಧ ವೇಶ್ಯಾವಾಟಿಕೆ ಕೇಸ್ ಇದೆ. ಹಲವಾರು ಅಧಿಕಾರಿಗಳ ವಿರುದ್ಧ ಈಕೆ ಇದೇ ರೀತಿ ಆರೋಪ ಮಾಡಿದ್ದಾಳೆ. ನನ್ನ ಕೌಟುಂಬಿಕ ಕಲಹದ ವಿಚಾರವಾಗಿ ನನ್ನ ಗಂಡನ ಪರವಾಗಿ ಆಕೆ, ಆಕೆಯ ಮಗ ಬಂದಿದ್ದರು. ಜೋರಾಗಿ ಮಾತಾಡಿದ್ದಳು. ಆಕೆ ಮಗ ವಿಡಿಯೋ ಮಾಡ್ತಿದ್ದ, ನನಗೆ ಹೊಡೆಯೋಕೆ ಬಂದ ಆಗ ಇನ್ಸ್ಪೆಕ್ಟರ್ ಎರಡೇಟು ಬಿಗಿದು ಕೂರಿಸಿದ್ದರು. ಇದೇ ವಿಷಯಕ್ಕೆ ಆಕೆ ಇನ್ಸ್‌ಪೆಕ್ಟರ್‌ ಮೇಲೆ ಜಿದ್ದು ಸಾದಿಸ್ತಿದ್ದಾಳೆ ಅಂತ ಹೇಳಿದ್ದಾರೆ.

ಈ ವಿವಾದದ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಈಗ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಇಂದು ಮಧ್ಯಾಹ್ನದವರೆಗೂ ಪಣಂಬೂರು ಠಾಣೆಯಲ್ಲಿ ಸಂದೇಶ್ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ, ಮೂಡಬಿದ್ರೆಯ ಶಾಸಕ ಉಮಾನಾಥ ಕೋಟ್ಯಾನ್ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿ, ಪತ್ರ ನೀಡಿದ್ದಾರೆ. ಇನ್ಸ್‌ಪೆಕ್ಟರ್‌ ಸಂದೇಶ್‌ರನ್ನು ಅಮಾನತಿನಲ್ಲಿಟ್ಟು ತನಿಖೆ ಮಾಡಬೇಕು ಅಂದಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್‌ಗೆ ವರದಿ ಕೊಡುವಂತೆ ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಇನ್ಸ್‌ಪೆಕ್ಟರ್‌ಸಂದೇಶರನ್ನು ಸಸ್ಪೆಂಡ್ ಮಾಡಲಾಗಿದೆ.ಇದನ್ನೂ ಓದಿ: ದೈವಾರಾಧನೆಯ ಕಟ್ಟುಪಾಡು ಮುರಿದು ನೇಮೋತ್ಸವ – ಕ್ರೈಸ್ತ ಸಮುದಾಯದ ವ್ಯಕ್ತಿಯಿಂದ ದೈವ ನರ್ತನ!

Share This Article