ಇರಾನ್‌ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗೆ ರಷ್ಯಾದಲ್ಲಿ ಚಿಕಿತ್ಸೆ!

3 Min Read

– ಮಿಲಿಟರಿ ವಿಮಾನದಲ್ಲಿ ಮಾಸ್ಕೋಗೆ ತೆರಳಿದ ನಾಯಕ
– ಕುವೈತ್‌ ಮೂಲದ ಪತ್ರಿಕೆಯ ವರದಿಯಿಂದ ಸಂಚಲನ

ಕುವೈತ್‌: ಅಮೆರಿಕ, ಇಸ್ರೇಲ್ ಮತ್ತು ಇರಾನ್ (Iran War) ನಡುವಿನ ಯುದ್ಧವು ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಇರಾನ್‌ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಈಗ ಮೊಜ್ತಬಾ ಖಮೇನಿ (Mojtaba Khamenei) ರಷ್ಯಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಸುದ್ದಿ ಪ್ರಕಟವಾಗಿದೆ.

ಸಂಘರ್ಷ ಆರಂಭವಾದ ಮೊದಲ ದಿನ ಅಂದರೆ ಫೆ.28 ರಂದು ತಂದೆ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಬಾಂಬ್‌ ದಾಳಿಯಲ್ಲಿ ಮೃತಪಟ್ಟಿದ್ದರು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೊಜ್ತಬಾ ಖಮೇನಿ ಈಗ ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ಬರುತ್ತಿದ್ದವು. ಆದರೆ ಈಗ ಅವರು ರಷ್ಯಾಗೆ ಹಾರಿದ್ದಾರೆ ಎಂಬ ವದಂತಿ ಹರಡಿದೆ.

ಕುವೈತ್‌ನಲ್ಲಿರುವ ಅಲ್-ಜರಿಡಾ ಪತ್ರಿಕೆ, ಅಮೆರಿಕ ಮತ್ತು ಇಸ್ರೇಲ್‌ ಖಮೇನಿ ಮನೆಗೆ ಬಾಂಬ್ ದಾಳಿ ನಡೆಸಿದ ಮರುದಿನ ಮೊಜ್ತಬಾ ಖಮೇನಿ ಅವರು ರಷ್ಯಾದ ಮಿಲಿಟರಿ ವಿಮಾನದಲ್ಲಿ ಮಾಸ್ಕೋಗೆ ತೆರಳಿದ್ದಾರೆ ಎಂದು ಇರಾನ್‌ ಸೇನಾ ಮೂಲಗಳನ್ನು ಆಧಾರಿಸಿ ವರದಿ ಮಾಡಿದೆ.

ಮಾಸ್ಕೋಗೆ ಬಂದ ನಂತರ ಮೊಜ್ತಬಾ ಖಮೇನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದಲ್ಲಿರುವ ಖಾಸಗಿ ವೈದ್ಯಕೀಯ ಸೌಲಭ್ಯದಲ್ಲಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್-ಜರಿಡಾ ಪತ್ರಿಕೆ ಇರಾನ್ ನಾಯಕತ್ವದ ಜೊತೆಗಿನ ಸಂಬಂಧ ಬಹಳ ಚೆನ್ನಾಗಿದೆ. ಈ ಕಾರಣಕ್ಕೆ ಈಗ ಈ ಸುದ್ದಿ ತೀವ್ರ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ನೇಪಾಳದಲ್ಲೀಗ ಲೀಟರ್‌ ಪೆಟ್ರೋಲ್‌ಗೆ 188 ರೂ., ಡೀಸೆಲ್‌ಗೆ 196 ರೂ.

ಖಮೇನಿಗೆ ಆಗಿರುವ ಗಾಯಗಳಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯದಲ್ಲಿ ಚಿಕಿತ್ಸೆ ಅಗತ್ಯವಿತ್ತು. ಮತ್ತಷ್ಟು ವಾಯುದಾಳಿ ನಡೆದರೆ ಇರಾನ್‌ನಲ್ಲಿ ಇದ್ದರೆ ಕಷ್ಟ ಎಂದು ತಿಳಿದು ಆರೋಗ್ಯ ಮತ್ತು ಭದ್ರತೆಯ ಕಾರಣದಿಂದ ಬಹಳ ರಹಸ್ಯವಾಗಿ ಅವರನ್ನು ವಿಮಾನದಲ್ಲಿ ಕಳುಹಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೊಸ ಸುಪ್ರೀಂ ನಾಯಕನ ಪತ್ತೆಗೆ ಇಸ್ರೇಲ್‌ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಆದರೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ಅವರು ಇರುವ ಸ್ಥಳದ ಬಗ್ಗೆ ಮಾಹಿತಿ ಸೋರಿಕೆಯಾಗಬಹುದು ಎಂದು ಇರಾನಿನ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ವರದಿ ಹೇಳಿದೆ.

ಖಮೇನಿಯನ್ನು ರಷ್ಯಾಕ್ಕೆ ಸ್ಥಳಾಂತರಿಸಲಾಗಿದೆ ಎಂಬ ವರದಿಗೆ ಇಲ್ಲಿಯವರೆಗೆ ಇರಾನಿನ ಅಥವಾ ರಷ್ಯಾದ ಅಧಿಕಾರಿಗಳು ದೃಢಪಡಿಸಿಲ್ಲ.

ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತನಾಡಿ, ಖಮೇನಿ ಜೀವಂತವಾಗಿದ್ದಾರೆಯೇ ಎನ್ನುವುವುದು ನನಗೆ ತಿಳಿದಿಲ್ಲ. ಇಲ್ಲಿಯವರೆಗೆ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ಜೀವಂತವಾಗಿದ್ದರೆ ತಮ್ಮ ದೇಶವನ್ನು ಉಳಿಸಲು ಶರಣಾಗುವುದು ಒಂದೇ ಮಾರ್ಗ ಎಂದು ಹೇಳಿದ್ದರು. ಇದನ್ನೂ ಓದಿ: ಇರಾನ್‌ ಯುದ್ಧದ ಬಗ್ಗೆ ಸುಳ್ಳು ಸುದ್ದಿ, ವೀಡಿಯೋ ಪೋಸ್ಟ್‌ – 19 ಭಾರತೀಯರ ಬಂಧನಕ್ಕೆ UAE ಆದೇಶ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಮೇನಿ ಇರುವ ಸ್ಥಳದ ಬಗ್ಗೆ ಇಸ್ರೇಲ್‌ಗೆ ಗುಪ್ತಚರ ಮಾಹಿತಿ ಇದೆ ಎಂಬ ಮಾಹಿತಿಯನ್ನು ಸೂಚ್ಯವಾಗಿ ತಿಳಿಸಿದ್ದರು. ಈ ಪ್ರಶ್ನೆಗೆ, ನಾನು ಅವರಿಗೆ ಜೀವ ವಿಮೆಯನ್ನು ಒದಗಿಸುವುದಿಲ್ಲ ಎಂದು ಉತ್ತರಿಸಿದ್ದರು.

ಹಲವರಿಗೆ ಪುಟಿನ್‌ ರಾಜಾಶ್ರಯ:
ಅಮೆರಿಕ ವಿರೋಧಿ ಧೋರಣೆ ಹೊಂದಿರುವ ಹಲವು ನಾಯಕರಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ರಾಜಾಶ್ರಯ ನೀಡಿದ್ದಾರೆ. ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ 2024 ರಿಂದ ಇದ್ದರೆ ಉಕ್ರೇನ್‌ನ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ 2014 ರಿಂದ ರಷ್ಯಾದಲ್ಲಿ ನೆಲೆಸಿದ್ದಾರೆ.

ಕಿರ್ಗಿಸ್ತಾನ್‌ನ ಮೊದಲ ಅಧ್ಯಕ್ಷ ಅಸ್ಕರ್ ಅಕಾಯೆವ್ ಟುಲಿಪ್ ಕ್ರಾಂತಿಯ ನಂತರ 2005 ರಲ್ಲಿ ರಷ್ಯಾಗೆ ಪಲಾಯನ ಮಾಡಿದ್ದರು. ಸದ್ಯ ಅವರು ಈಗ ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

Share This Article