ಸಿಕ್ಸರ್‌ನಲ್ಲಿ ಶತಕ ಹೊಡೆದು ವಿಶ್ವದಾಖಲೆ – ಯಾರು ಎಷ್ಟು ಸಿಕ್ಸ್‌?

1 Min Read

ಅಹಮದಾಬಾದ್‌: ಟಿ20 ವಿಶ್ವಕಪ್‌ (T20 World Cup) ಚಾಂಪಿಯನ್‌ ಆಗುವುದರ ಜೊತೆಗೆ ಭಾರತ (Team India) ಸಿಕ್ಸರ್‌ನಲ್ಲಿ (Six) ಶತಕ ಸಿಡಿಸಿ ವಿಶ್ವದಾಖಲೆ ಬರೆದಿದೆ. ಈ ಟೂರ್ನಿಯಲ್ಲಿ 9 ಪಂದ್ಯವಾಡಿದ ಭಾರತ ಬರೋಬ್ಬರಿ 106 ಸಿಕ್ಸ್‌ ಹೊಡೆದಿದೆ.

ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ 18 ಸಿಕ್ಸ್‌ ಹೊಡೆದಿದ್ದರೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 19 ಸಿಕ್ಸ್‌ ಚಚ್ಚಿದ್ದರು. 19 ಸಿಕ್ಸ್‌ ಹೊಡೆದಿದ್ದು ಟಿ20ಯಲ್ಲಿ ದಾಖಲೆ. ಒಂದು ಪಂದ್ಯದಲ್ಲಿ ಇಷ್ಟೊಂದು ಸಿಕ್ಸ್‌ ಯಾವ ತಂಡದಿಂದ ದಾಖಲಾಗಿರಲಿಲ್ಲ.

ಟಿ 20 ವಿಶ್ವಕಪ್‌ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಎರಡನೇ ತಂಡ ವೆಸ್ಟ್‌ ಇಂಡೀಸ್‌. ಈ ಟೂರ್ನಿಯಲ್ಲೇ 76 ಸಿಕ್ಸ್‌ ಸಿಡಿಸಿದರೆ ಈ ಟೂರ್ನಿಯಲ್ಲೇ ದಕ್ಷಿಣ ಆಫ್ರಿಕಾ 72 ಸಿಕ್ಸ್‌ ಹೊಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದೆ.  ಇದನ್ನೂ ಓದಿ: ಫೈನಲಿನಲ್ಲಿ ಸೋಲೇ ಇಲ್ಲ – ಶಿವಂ ದುಬೆ ಟೀಂ ಇಂಡಿಯಾದ ಲಕ್ಕಿ ಪ್ಲೇಯರ್‌

ಯಾರು ಎಷ್ಟು ಸಿಕ್ಸ್‌?
24 – ಸಂಜು ಸ್ಯಾಮ್ಸನ್‌
18 – ಇಶನ್‌ ಕಿಶನ್‌
17 – ಶಿವಂ ದುಬೆ
15 – ಹಾರ್ದಿಕ್‌ ಪಾಂಡ್ಯ
11 – ತಿಲಕ್‌ ವರ್ಮಾ
10 – ಸೂರ್ಯಕುಮಾರ್‌ ಯಾದವ್‌
8 – ಅಭಿಷೇಕ್‌ ಶರ್ಮಾ
2 – ರಿಂಕು ಸಿಂಗ್‌
1 – ವಾಷಿಂಗ್ಟನ್‌ ಸುಂದರ್‌ ಇದನ್ನೂ ಓದಿ: 4 ವಿಶ್ವದಾಖಲೆಯೊಂದಿಗೆ ವಿಶ್ವಚಾಂಪಿಯನ್‌ – ಇತಿಹಾಸ ಬರೆದ ಟೀಂ ಇಂಡಿಯಾ

Share This Article