ರಿಯಾದ್: ಸೌದಿ ಅರೇಬಿಯಾದ(Saudi Arabia) ಸರ್ಕಾರಿ ತೈಲ ಕಂಪನಿ ಸೌದಿ ಅರಾಮ್ಕೊದ (Saudi Aramco) ಮೇಲೆಯೇ ಇರಾನ್ (Iran) ಡ್ರೋನ್ ದಾಳಿ ನಡೆಸಿದೆ.
ಸೋಮವಾರದ ಡ್ರೋನ್ (Drone) ದಾಳಿಯ ನಂತರ ತನ್ನ ರಾಸ್ ತನುರಾ ಸಂಸ್ಕರಣಾಗಾರವನ್ನು ಸೌದಿ ಅರಾಮ್ಕೊ ಮುಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಲ್ಫ್ ಕೊಲ್ಲಿಯಲ್ಲಿರುವ ರಾಸ್ ತನುರಾ ಕಾಂಪ್ಲೆಕ್ಸ್ ಮಧ್ಯಪ್ರಾಚ್ಯದ ಅತಿದೊಡ್ಡ ಸಂಸ್ಕರಣಾಗಾರಗಳ ಪೈಕಿ ಒಂದಾಗಿದ್ದು ಇದು ದಿನಕ್ಕೆ 550,000 ಬ್ಯಾರೆಲ್ಗಳ (bpd) ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಮುಖ್ಯವಾಗಿ ಸೌದಿಯ ಕಚ್ಚಾ ತೈಲವನ್ನು ರಫ್ತು ಮಾಡುವ ಪ್ರಮುಖ ಟರ್ಮಿನಲ್ ಆಗಿಯೂ ಕೆಲಸ ಮಾಡುತ್ತದೆ. ಇದನ್ನೂ ಓದಿ: ಇರಾನ್ ಮೇಲೆ ದಾಳಿ ನಡೆಸಿ – ಟ್ರಂಪ್ಗೆ ಹಲವು ಬಾರಿ ಫೋನ್ ಮಾಡಿ ಒತ್ತಡ ಹೇರಿದ್ದ ಸೌದಿ
JUST IN: 🇸🇦 Iran strikes Saudi Arabia’s Aramco Ras Tanura oil refinery. pic.twitter.com/eTmPGRFAY5
— BRICS News (@BRICSinfo) March 2, 2026
ದಾಳಿ ಯಾಕೆ?
ಇರಾನ್ ಆರಂಭದಲ್ಲಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆದರೆ ಈಗ ಸೌದಿ, ಯುಎಇ, ಕತಾರ್, ಕುವೈತ್, ಬಹರೇನ್ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದನ್ನೂ ಓದಿ: ಇರಾನ್ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಯುಕೆ, ಫ್ರಾನ್ಸ್, ಜರ್ಮನಿ ಸಿದ್ಧ
ಸೌದಿ ಅರಾಮ್ಕೊದ ತೈಲ ಸಂಸ್ಕರಣಾ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದಿರುವುದು ಇದು ಹೊಸದೆನಲ್ಲ. ಈ ಹಿಂದೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅರಾಮ್ಕೊದ ಅತಿದೊಡ್ಡ ತೈಲ ಸಂಸ್ಕರಣಾ ಘಟಕಗಳಾದ ಪೂರ್ವ ಸೌದಿ ರೇಬಿಯಾದ ಅಬ್ಕೈಕ್ ಮತ್ತು ಖುರೈಸ್ಗಳ ಮೇಲೆ ದಾಳಿ ನಡೆಸಿದ್ದರು. ಘಟಕಗಳನ್ನು ಗುರಿಯಾಗಿಸಿಕೊಂಡು 10 ಡ್ರೋನ್ಗಳನ್ನು ಹಾರಿಸಿ ದಾಳಿ ಮಾಡಿದ್ದರು. ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

