ಕುವೈತ್ ಸಿಟಿ: ಕುವೈತ್‌ನಲ್ಲಿಂದು ಅಮೆರಿಕದ ಹಲವಾರು ಎಫ್-15 ಯುದ್ಧ ವಿಮಾನಗಳು ಪತನಗೊಂಡಿವೆ (F15 Jet Crash) ಎಂದು ಕುವೈತ್ ಸೇನೆ (Kuwait Army) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಅಪಘಾತಕ್ಕೂ ಮುನ್ನ ಪೈಲಟ್‌ಗಳು ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ. ಆದ್ರೆ ಅಪಘಾತಕ್ಕೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
BREAKING: American warplane (F-15) crashes in Kuwait.
Locals claim the crash occured after friendly fire. Pilot ejected. pic.twitter.com/jOhxqXMBdg
— Treeni (@treeni) March 2, 2026
ಸದ್ಯ ಎಫ್-15 ವಿಮಾನವನ್ನು ಇರಾನ್ (Iran) ಹೊಡೆದುರುಳಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದ್ರೂ ಯಾವುದೇ ದೃಢೀಕರಣವಿಲ್ಲ. ಆದ್ರೆ ಇರಾನ್ ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ಮುಂದುವರಿಸಿದ್ದು, ಇದೇ ಸಂದರ್ಭದಲ್ಲಿ ಅಮೆರಿಕದ ಯುದ್ಧ ವಿಮಾನಗಳು ಪತನಗೊಂಡಿವೆ. ವಿಮಾನ ಪತನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆಕಾಶದಿಂದ ಎಫ್-15 ಜೆಟ್ ನೆಲಕ್ಕೆ ಅಪ್ಪಳಿಸುತ್ತಿರುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ.
بيان رقم 7
صرّح الناطق الرسمي باسم وزارة الدفاع بأنه في صباح هذا اليوم سقطت عدد من الطائرات الحربية الأمريكية، مؤكداً نجاة أطقمها بالكامل.
وأوضح أن الجهات المختصة باشرت فوراً إجراءات البحث والإنقاذ، حيث تم إخلاء الأطقم ونقلهم إلى المستشفى للاطمئنان على حالتهم الصحية وتقديم… pic.twitter.com/HYX3LGqEX1
— KUWAIT ARMY – الجيش الكويتي (@KuwaitArmyGHQ) March 2, 2026
ದುರಂತದಲ್ಲಿ ಎಲ್ಲಾ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುವೈತ್ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಇದನ್ನೂ ಓದಿ: ಆಪರೇಷನ್ ʻರೋರಿಂಗ್ ಲಯನ್ʼ – ಲೆಬನಾನ್ ಮೇಲೆ ಇಸ್ರೇಲ್ ಮಿಸೈಲ್ ಮಳೆ; 31 ಮಂದಿ ಸಾವು
ಅಮೆರಿಕ ವರದಿಗಳ ಪ್ರಕಾರ, ಇರಾನ್ ಸೇನೆಯು ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುವಾಗ ಯುದ್ಧ ವಿಮಾನಗಳನ್ನ ಹೊಡೆದುಹಾಕಿದೆ ಎನ್ನಲಾಗಿದೆ. ಈ ಮಧ್ಯೆ ದೋಹಾದಾದ್ಯಂತ ಹಲವಾರು ಕಡೆ ಭೀಕರ ಸ್ಫೋಟ ಶಬ್ಧಗಳು ಕೇಳಿಬಂದಿವೆ. ಜನರು ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಇರಾನ್ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಯುಕೆ, ಫ್ರಾನ್ಸ್, ಜರ್ಮನಿ ಸಿದ್ಧ


