ಹಿರೆಹಳ್ಳಿ ಬಳಿ ಲಾರಿಗೆ ಕಾರು ಡಿಕ್ಕಿ – ಮಂತ್ರಾಲಯದಿಂದ ಹಿಂದಿರುಗುತ್ತಿದ್ದ ಮೂವರು ದುರ್ಮರಣ, ಇಬ್ಬರು ಗಂಭೀರ

1 Min Read

ಚಿತ್ರದುರ್ಗ: ನಿಂತಿದ್ದ ಲಾರಿಗೆ (Lorry) ಕಾರೊಂದು (Car) ಡಿಕ್ಕಿಯಾಗಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಚಳ್ಳಕೆರೆ (Challakere) ತಾಲೂಕಿನ ಹಿರೆಹಳ್ಳಿ ಬಳಿ ನಡೆದಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಐವರು ಕಾರಲ್ಲಿ ಮಂತ್ರಾಲಯಕ್ಕೆ ತೆರಳಿದ್ದರು. ರಾಯರ ದರ್ಶನ ಮುಗಿಸಿ ಮಂತ್ರಾಲಯದಿಂದ ಕುಣಿಗಲ್‌ಗೆ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಕಾರಿನ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದಿಂದ ಅವಘಡ ಸಂಭವಿಸಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಲ್ಲಿದ್ದ ಗುಬ್ಬಿ ತಾಲೂಕಿನ ಹೊಸಕೆರೆ ಗ್ರಾಮದ ನರಸಿಂಹ ಮೂರ್ತಿ (38), ಗಂಗಾಧರ್ (35),ಲೋಹಿತ್ (40) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ನಿರುದ್ಯೋಗಿಗಳ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ – 56 ಸಾವಿರ ನೇಮಕಾತಿಗೆ ಗ್ರೀನ್ ಸಿಗ್ನಲ್

ಇನ್ನು ಡಿಕ್ಕಿಯ ರಭಸಕ್ಕೆ ಕಾರಿನ ಚಾಲಕನ ಬದಿಯಲ್ಲಿ ಕುಳಿತಿದ್ದವರ ತಲೆ ಕಟ್ ಆಗಿದ್ದು, ಉಳಿದ ಇಬ್ಬರು ಗಂಭಿರವಾಗಿ ಗಾಯಗೊಂಡು ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬAಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೇಮಕಾತಿ ಪ್ರಕ್ರಿಯೆಗೆ ತೊಡಕಾಗಿದ್ದ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

Share This Article