ಬೆಂಗಳೂರಲ್ಲಿ ಕೇರಳ ಪೊಲೀಸರ ಬೇಟೆ – ಕುಖ್ಯಾತ ಅಂತಾರಾಜ್ಯ ಗಾಂಜಾ ಪೆಡ್ಲರ್‌ ಬಂಧನ

1 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಕೇರಳ ಪೊಲೀಸರು (Kerala Police) ಭರ್ಜರಿ ಬೇಟಿ ನಡೆಸಿ, ಕುಖ್ಯಾತ ಅಂತರರಾಜ್ಯ ಗಾಂಜಾ ಪೆಡ್ಲರ್‌ನನ್ನು (Ganja Peddler) ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಧೀರೇಶ್ ಕುಟುಮ್ (27) ಬಂಧಿತ ಆರೋಪಿ. ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೈಲಸಂದ್ರದಲ್ಲಿ ದಾಳಿ ನಡೆಸಿ, 1 ಕೋಟಿ ಮೌಲ್ಯದ 2 ಕೆಜಿ ಎಂಡಿಎಂಎ ಡ್ರಗ್ಸ್ ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಖಾತೆ ಬದಲಾವಣೆಗಾಗಿ 8,500 ರೂ. ಲಂಚ ಸ್ವೀಕಾರ – ಲೋಕಾ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

ಕೇರಳ ಮಾದಕವಸ್ತು ವಿರೋಧಿ ವಿಶೇಷ ಕಾರ್ಯಪಡೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತು. ಸೆರೆಲ್ಯಾಕ್ ಪಾಕೆಟ್‌ಗಳಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡಲಾಗುತ್ತಿತ್ತು. ರಮೇಶ್ ರೆಡ್ಡಿ ಬಡಾವಣೆಯ ಮನೆಯೊಂದರಲ್ಲಿ ಪೊಲೀಸರು ಸೀಜ್‌ ಮಾಡಿದ್ದಾರೆ. ಸತ್ಯಜಿತ್‌ ನೇತೃತ್ವದ ತಂಡದಿಂದ ದಾಳಿ ನಡೆದಿತ್ತು.

ದಾಳಿ ವೇಳೆ 2 ಕೆಜಿ ತೂಕದ ನಾಲ್ಕು ಪ್ಯಾಕೆಟ್‌, 15 ಕ್ಕೂ ಅಧಿಕ ಖಾಲಿಯಾದ ಸೆರೆಲ್ಯಾಕ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಸ್ವಿಗ್ಗಿ ಜೊಮ್ಯಾಟೊ ಡೆಲಿವರಿ ಬಾಯ್ ರೀತಿ ಎಂಡಿಎಂಎ ಸರಬರಾಜು ಮಾಡಲಾಗುತ್ತಿತ್ತು. ಕೇರಳದ ಮಲ್ಲಪುರಂನಲ್ಲಿ ಆರೋಪಿ ಧೀರೇಶ್ ಸಹಚರರು ಸಿಕ್ಕಿಬಿದ್ದಿದ್ದರು. ವಾರದ ಹಿಂದೆ 1 ಕೆಜಿ ಎಂಡಿಎಂಎ ಸಹಿತ 8 ಮಂದಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕಿಂಗ್‌ಪಿನ್ ಧೀರೇಶ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನೂ ಓದಿ: ನೇಣು ಬಿಗಿದು ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸೂಸೈಡ್

ಆರೋಪಿ ಧೀರೇಶ್ ತಂಗಿ ಪತಿ ನೈಜೀರಿಯಾ ಮೂಲದವನು. ಆತನ ಮೂಲಕ ಎಂಡಿಎಂಎ ಡ್ರಗ್ಸ್ ಅಸ್ಸಾಂಗೆ ರವಾನೆಯಾಗುತ್ತಿತ್ತು. ಅಸ್ಸಾಂನಲ್ಲಿರುವ ತಂಗಿ ಮೂಲಕ ಕೇರಳ, ಕರ್ನಾಟಕಕ್ಕೆ ಸಾಗಣೆ ಮಾಡಲಾಗುತ್ತಿತ್ತು. ಪ್ರಕರಣ ಸಂಬಂಧ ಕೇರಳ‌ ಪೊಲೀಸರಿಂದ 9 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು ಮೂರು ಕೆಜಿಯಷ್ಟು ಎಂಡಿಎಂಎ ಸೀಜ್ ಮಾಡಲಾಗಿದೆ.

Share This Article