ನಿರ್ದೇಶಕನ ಕಿಡ್ನ್ಯಾಪ್ ಕೇಸ್‌ – ಭೀಮಾ ಸಿನಿಮಾ ನಟಿ ಸೇರಿ 11 ಜನ ಅರೆಸ್ಟ್‌

2 Min Read

ಬೆಂಗಳೂರು: ನಿರ್ದೇಶಕ ಅನಿಶ್‌ (Director Aneesh) ಅವರನ್ನ ಕಿಡ್ನ್ಯಾಪ್ ಮಾಡಿ ಚಿನ್ನಾಭರಣ ದೋಚಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಭೀಮಾ ಸಿನಿಮಾ ನಟಿ ಸೇರಿ 11 ಜನ ಅರೆಸ್ಟ್‌ ಆಗಿದ್ದಾರೆ.

ಆಡುಗೋಡಿ ಪೊಲೀಸ್ ಠಾಣೆ (Adugodi Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಕೆಲ ಶಾರ್ಟ್ ಫಿಲ್ಮ್‌ ಮಾಡಿದ್ದ ನಿರ್ದೇಶಕ ಅನಿಶ್‌ ಇತ್ತೀಚೆಗೆ ʻಜೀವನದ ಭಾಷೆʼ ಎನ್ನುವ ಹೊಸ ಸಿನಿಮಾವೊಂದನ್ನ ಶುರು ಮಾಡಿದ್ದರು. ಕಾರಣಾಂತರಗಳಿಂದ ಸಿನಿಮಾ ನಿಲ್ಲಿಸಿ ಮುಂಬೈಗೆ ಶಿಫ್ಟ್ ಆಗಿದ್ದರು. ಬೆಂಗಳೂರಿನಿಂದ (Bengaluru) ಮುಂಬೈಗೆ ಶಿಫ್ಟ್ ಆಗಿದ್ದ ನಿರ್ದೇಶಕ, ನಟಿ ಐಶ್ವರ್ಯಾಗೆ (ಭೀಮಾ ಸಿನಿಮಾದಲ್ಲಿ ನಟಿಸಿರು ನಟಿ) ತನ್ನ ಕಾರು ಮಾರಾಟದ ಬಗ್ಗೆ ವಿಚಾರ ತಿಳಿಸಿದ್ದರು.

ನಟಿಯ ಮೂಲಕ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು, ಕಾರು ಖರೀದಿ ಮಾಡೋದಾಗಿ ಹೇಳಿದ್ದರು. ಅದಕ್ಕಾಗಿ ನಟಿಯ ಮೂಲಕ ನಿರ್ದೇಶಕನನ್ನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿನ ಪ್ರದೇಶವೊಂದಕ್ಕೆ ಕರೆಸಿಕೊಂಡು ಕಿಡ್ನ್ಯಾಪ್ ಮಾಡಿದ್ದರು. ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿದ ಬಳಿಕ ನಿರ್ದೇಶಕನನ್ನ ಬ್ಯಾರಹಳ್ಳಿ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್, ಹಾಕಿ ಸ್ಟಿಕ್‌ನಿಂದಲೂ ಹಲ್ಲೆ ನಡೆಸಿದ್ದರು. ಬಳಿಕ ಆತನ ಬಳಿಯಿದ್ದ ಚಿನ್ನಾಭರಣ ದೋಚಿಕೊಂಡು, ತುಮಕೂರಿನ ಮಧುಗಿರಿ ಬಳಿ ಬಿಟ್ಟಿದ್ದರು.

ಈ ಸಂಬಂಧ ನಿರ್ದೇಶಕ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಆಡುಗೋಡಿ ಠಾಣೆಯ ಪೊಲೀಸರು, 11 ಜನರನ್ನ ಬಂಧಿಸಿದ್ದಾರೆ. ಇದನ್ನೂ ಓದಿ: I love You So Much – ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ಡಿದ ಯೂಟ್ಯೂಬರ್

ಪರಿಚಯಸ್ಥರಿಂದಲೇ ಕಿಡ್ನ್ಯಾಪ್‌ ಪ್ಲ್ಯಾನ್‌
ʻಜೀವನದ ಭಾಷೆʼ ಎಂಬ ಸಿನಿಮಾ‌ ನಿರ್ದೇಶನ ಮಾಡ್ತಿದ್ದ ಅನೀಶ್ ಈ ಮುಂಚೆ ʻಭರವಸೆಯ ಜೀವನʼ ಎಂಬ ಶಾರ್ಟ್ ಮೂವಿ ಮಾಡಿದ್ದರು. ನಂತರ ಜೀವನದ ಭಾಷೆ ಎಂಬ ಸಿನಿಮಾ ಮಾಡುತ್ತಿದ್ದರು. ಭೀಮಾ ಸಿನಿಮಾ ನಟಿ ಐಶ್ವರ್ಯಾ (Actress Aishwarya) ಮೂಲಕ ನಿರ್ದೇಶಕನ ಸಂಪರ್ಕ ಮಾಡಲಾಗಿತ್ತು. ದುನಿಯಾ ವಿಜಯ್ ಅಭಿನಯದ ಭೀಮಾ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ ಕಾರು ಖರೀದಿ ಮಾಡ್ತೀವಿ ಎಂದು ಕರೆ ಮಾಡಿ ಕಿಡ್ನಾಪ್ ಮಾಡಿದ್ರು. ಪರಿಚಯಸ್ಥನಿಂದಲೇ ಕಿಡ್ನ್ಯಾಪ್‌ ಪ್ಲ್ಯಾನ್‌ ಮಾಡಿರೋದು ನಂತರ ಬೆಳಕಿಗೆ‌ ಬಂದಿದೆ. ಪ್ರಮುಖ ಆರೋಪಿ ಆಶೀರ್ವಾದ್ ಎಂಬಾತನದ್ದೇ ಪಕ್ಕಾ ಪ್ಲ್ಯಾನ್‌ ಅನ್ನೋದು ಗೊತ್ತಾಗಿದೆ.

5 ಲಕ್ಷ ಹಣದ ವಿಚಾರಕ್ಕೆ ಆಶೀರ್ವಾದ್ ಮತ್ತು ನಿರ್ದೇಶಕನ ನಡುವೆ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಕಿಡ್ನ್ಯಾಪ್‌ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ನಟಿ ಐಶ್ವರ್ಯಾ ಸೇರಿ ಹನ್ನೊಂದು ಜನ ಆರೋಪಿಗಳನ್ನ ಬಂಧಿಸಲಾಗಿದ್ದು, ಆಡುಗೋಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಸಾಮಾಜಿಕ ಮಾಧ್ಯಮ ವೇದಿಕೆಗಳು ನ್ಯಾಯಯುತ ಆದಾಯ ಹಂಚಬೇಕು: ಅಶ್ವಿನಿ ವೈಷ್ಣವ್‌

Share This Article