ಖಾತೆ ಬದಲಾವಣೆಗಾಗಿ 8,500 ರೂ. ಲಂಚ ಸ್ವೀಕಾರ – ಲೋಕಾ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ

1 Min Read

ಹಾವೇರಿ: ಖಾತೆ ಬದಲಾವಣೆಗಾಗಿ 8,500 ರೂ. ಲಂಚ (Bribe) ಸ್ವೀಕಾರ ಮಾಡುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿ (Village Accountant) ಲೋಕಾಯುಕ್ತದ (Lokayukta) ಬಲೆಗೆ ಬಿದ್ದಿರುವ ಘಟನೆ ಹಾವೇರಿ (Haveri) ತಾಲೂಕಿನ ನೆಗಳೂರು ಗ್ರಾಮದ ಕಚೇರಿಯಲ್ಲಿ ನಡೆದಿದೆ.

ಪಕ್ಕೀರೇಶ ಬಾರ್ಕಿ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ. ಪಕ್ಕೀರೇಶ ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಕೆಸರಳ್ಳಿ ಎಂಬವರ ಬಳಿ ಖಾತೆ ಬದಲಾವಣೆಗೆ 63,000 ರೂ.ಗೆ ಬೇಡಿಕೆ ಇಟ್ಟಿದ್ದ. 30 ಸಾವಿರ ಹಣ ಮೊದಲೇ ಕೊಟ್ಟಿದ್ದರು. ಇಂದು 8,500 ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ನಿರುದ್ಯೋಗ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದು ಹಾಸ್ಯಾಸ್ಪದ: ಬಿ.ಕೆ.ಹರಿಪ್ರಸಾದ್‌

ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಆರೋಪಿಯನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಏ.1 ರಿಂದ ಇ20 ಮಿಶ್ರಿತ RON 95 ಇರೋ ಪೆಟ್ರೋಲ್‌ ಮಾರಾಟ ಕಡ್ಡಾಯ

Share This Article