ಅಂದು ಅಭಿಷೇಕ್‌ ಇಂದು ಇಶಾನ್‌ ಕಿಶನ್‌ – ಅಫ್ರಿದಿಗೆ ಬಿಸಿ ಮುಟ್ಟಿಸಿದ ಓಪನರ್ಸ್‌

1 Min Read

ಕೊಲಂಬೋ: ಪಾಕಿಸ್ತಾನದ (Pakistan) ವೇಗದ ಬೌಲರ್‌ ಶಾಹೀನ್ ಶಾ ಅಫ್ರಿದಿ(Shaheen Shah Afridi) ಎಸೆದ ಮೊದಲ ಓವರ್‌ನ ಮೊದಲ ಎಸೆತವನ್ನೇ ಇಶಾನ್‌ ಕಿಶಾನ್‌(Ishan Kishan) ಸಿಕ್ಸರ್‌ಗೆ ಅಟ್ಟಿ ಬಿಸಿ ಮುಟ್ಟಿಸಿದ್ದರು.

ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಅಭಿಷೇಕ್‌ ಶರ್ಮಾ (Abhishek Sharma ) ಅವರು ಶಾಹೀನ್ ಶಾ ಅಫ್ರಿದಿ ಎಸೆದ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು.

ಎರಡನೇ ಓವರ್‌ನಲ್ಲಿ ಇಶಾನ್‌ ಸಿಕ್ಸ್‌ ಮತ್ತು ಬೌಂಡರಿ ಹೊಡೆದರೆ ತಿಲಕ್‌ ವರ್ಮಾ ಬೌಂಡರಿ ಹೊಡೆದಿದ್ದರು. ಈ ಓವರ್‌ನಲ್ಲಿ ಒಂದು ಸಿಂಗಲ್‌ ಸೇರಿದಂತೆ ಒಟ್ಟು 15 ರನ್‌ ಬಂದಿತ್ತು.

ಅಭಿಷೇಕ್‌ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರೂ ಇಶನ್ ಕಿಶನ್‌ ಅಬ್ಬರದ ಬ್ಯಾಟ್‌ ಬೀಸಿದರು. 27 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕಿಶನ್‌ ಅಂತಿಮವಾಗಿ 77 ರನ್‌(40 ಎಸೆತ, 10 ಬೌಂಡರಿ, 3 ಸಿಕ್ಸ್‌) ಹೊಡೆದು ಬೌಲ್ಡ್‌  ಔಟಾದರು.

ಇಶನ್‌ ಕಿಶನ್‌ ಕಿಶನ್‌ ಔಟಾದಾಗ ತಂಡದ ಮೊತ್ತ 88 ರನ್‌ ಆಗಿತ್ತು ಈ ಪೈಕಿ ಎರಡನೇ ವಿಕೆಟಿಗೆ ಇಶನ್‌ ಕಿಶನ್‌ ಮತ್ತು ತಿಲಕ್‌ ವರ್ಮ 46 ಎಸೆತಗಳಲ್ಲಿ 87 ರನ್‌ ಜೊತೆಯಾಟ ಆಡಿದ್ದರು. ಈ ಪೈಕಿ ಇಶನ್‌ ಒಬ್ಬರೇ 76 ರನ್‌ ಹೊಡೆದಿದ್ದರು.

Share This Article