ಬೆಂಗಳೂರಲ್ಲಿ ಪುತ್ರನಿಂದ ತಂದೆ-ತಾಯಿ ಕೊಲೆ ಕೇಸ್;‌ ಕೊಂದ ಮಗನಿಂದಲೇ ಅಂತ್ಯಸಂಸ್ಕಾರಕ್ಕೆ ಕೋರ್ಟ್ ಅವಕಾಶ

1 Min Read

ಬೆಂಗಳೂರು: ತಂದೆ-ತಾಯಿಯನ್ನು ಹತ್ಯೆ ಮಾಡಿದ ಪುತ್ರನಿಂದಲೇ ಪೋಷಕರ ಅಂತ್ಯಸಂಸ್ಕಾರ ನೆರವೇರಿಸಲು ಕೋರ್ಟ್‌ ಅವಕಾಶ ಕಲ್ಪಿಸಿದೆ.

- Advertisement -

ನಿವೃತ್ತ ನೇವಿ ಕ್ಯಾಪ್ಟನ್ ನವೀನ್ ಚಂದ್ರ ಭಟ್ ಮತ್ತು ಶ್ಯಾಮಲಾ ಭಟ್ ಅಂತ್ಯಸಂಸ್ಕಾರಕ್ಕೆ ಆರೋಪಿ ಪುತ್ರ ರೋಹ‌ನ್ ಭಟ್‌ಗೆ ಕೋರ್ಟ್‌ ಅನುಮತಿ ನೀಡಿದೆ. ವಿದೇಶದಿಂದ ಆಗಮಿಸಿರುವ ಮೃತರ ಪುತ್ರಿ ಕೋರ್ಟ್‌ಗೆ ಮನವಿ ಮಾಡಿದ್ದರು. ಸಹೋದರನಿಂದಲೇ ತಂದೆ-ತಾಯಿ ಅಂತ್ಯಸಂಸ್ಕಾರಕ್ಕೆ ಕೋರಿದ್ದರು. ಸೋದರಿ ಮನವಿ ಹಿನ್ನೆಲೆ ಕೋರ್ಟ್‌ ಅವಕಾಶ ನೀಡಿದೆ. ಇದನ್ನೂ ಓದಿ: ಮುಂಬೈ-ಸೋಲಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಹಾವು ಬಿಟ್ಟ ವ್ಯಕ್ತಿ ಅರೆಸ್ಟ್

- Advertisement -

- Advertisement -

ನಿಮ್ಹಾನ್ಸ್‌ನಿಂದ ವಿಲ್ಸನ್ ಗಾರ್ಡನ್ ಚಿತಾಗಾರಕ್ಕೆ ಆರೋಪಿಯನ್ನು ಪೊಲೀಸರು ಕರೆತಂದು, ಹತ್ಯೆ ಆರೋಪಿ ಪುತ್ರನಿಂದಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

- Advertisement -

ಆರೋಪಿ ರೋಹನ್‌ ಭಟ್‌, ಸ್ಕಿಜೋಫ್ರೇನಿಯಾ ಎಂಬ ಮನೋ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕಳೆದ ಕೆಲ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದೇ ಕಾರಣಕ್ಕೆ ವಿದೇಶದ ಕೆಲಸಕ್ಕೆ ಟೆಕ್ಕಿ ರೋಹನ್ ರಾಜೀನಾಮೆ ನೀಡಿದ್ದ. ಇದನ್ನೂ ಓದಿ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

Share This Article