ಸ್ಕೂಟರ್ ಮೇಲೆ ಹರಿದ ಶಾಲಾ ಬಸ್ – ಇಬ್ಬರು ಪುಟ್ಟ ಕಂದಮ್ಮಗಳು ಸಾವು

1 Min Read

ಬೆಂಗಳೂರು: ಬೈಕ್ ಮೇಲೆ ಖಾಸಗಿ ಬಸ್ ಹರಿದು ಇಬ್ಬರು ಪುಟ್ಟ ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಥಣಿಸಂದ್ರ ಬಳಿ ನಡೆದಿದೆ.

ಇಂದು ಬೆಳಗ್ಗೆ ಸಿಎಆರ್ ಹೆಡ್ ಕಾನ್ಸ್ಟೇಬಲ್ ನಾಗನಗೌಡ ಮಾಲಿಪಾಟೀಲ್ ಅವರು ತಮ್ಮ ಡಿಯೋ ಸ್ಕೂಟರ್‌ನಲ್ಲಿ ತನ್ನ ಮಗಳಾದ 2 ವರ್ಷದ ವರ್ಷಾ ಮತ್ತು ಅಣ್ಣನ ಮಗಳು 4 ವರ್ಷದ ಬಾನು ಅವರನ್ನು ನಿಲ್ಲಿಸಿಕೊಂಡು ಹೊರಟಿದ್ದರು. ಥಣಿಸಂದ್ರದ ಪಿಟಿಎಸ್ ಕಡೆಯಿಂದ ಹೆಗಡೆನಗರದ ಕಡೆಗೆ ಹೋಗಲು ಸೆಂಟ್ರಲ್ ರೆವನ್ಯೂ ಲೇಔಟ್ ಮೈನ್ ರೋಡ್ ನಲ್ಲಿ ಹೋಗುವಾಗ, 3ನೇ ಕ್ರಾಸ್ ಕಡೆಯಿಂದ ಹಜ್ ಮೋನಿ ಸ್ಕೂಲ್ ಬಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಮಾದಪ್ಪನ ದರ್ಶನಕ್ಕೆ 2ನೇ ದಿನವೂ ಸಾವಿರಾರು ಭಕ್ತರ ಪಾದಯಾತ್ರೆ – ಹಗ್ಗಕಟ್ಟಿ ನದಿ ದಾಟಿಸಿದ SDRF ತಂಡ

ಮಕ್ಕಳ ಮೇಲೆ ಖಾಸಗಿ ಶಾಲಾ ಬಸ್ ಹರಿದ ಪರಿಣಾಮ ಇಬ್ಬರೂ ಸಾವಿಗೀಡಾಗಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಮೃತದೇಹ ಇರಿಸಲಾಗಿದೆ. ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಾಲಾ ಬಸ್ ಹರಿದ ಪರಿಣಾಮ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾನ್‌ಸ್ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕ ಮಾರೇಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದು ಕಾರ್ಮಿಕ ಸಾವು

Share This Article