– ತಪ್ಪಿದ ಭಾರೀ ಅನಾಹುತ
ಬೆಂಗಳೂರು: ಪ್ಲಾಸ್ಟಿಕ್ ಗೋಡೌನ್ಗೆ (Plastic Godown) ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ (Doddakammanahalli) ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದ (Short Circuit) ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಇನ್ನೂ ಬೆಂಕಿ ಹತೋಟಿಗೆ ಬಂದಿಲ್ಲ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್ – ಧಗಧಗಿಸಿದ ಕಟ್ಟಡ, ಇಬ್ಬರಿಗೆ ಗಂಭೀರ ಗಾಯ
ಪ್ಲಾಸ್ಟಿಕ್ ಗೋಡೌನ್ ಸಮೀಪವೇ ಗ್ಯಾಸ್ ಸಿಲಿಂಡರ್ ಗೋಡೌನ್ ಇತ್ತು. ಗ್ಯಾಸ್ ಗೋಡೌನ್ಗೆ ಬೆಂಕಿ ವ್ಯಾಪಿಸಿದ್ರೆ ದೊಡ್ಡ ಅನಾಹುತ ಆಗುವ ಸಾಧ್ಯತೆಯಿತ್ತು. ಸದ್ಯ ಭಾರೀ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಅಲ್ಪಸಂಖ್ಯಾತ ನಿಗಮ ಮಂಡಳಿ ಸಾಲದ ಬಡ್ಡಿ ಮನ್ನಾ – ಇದು ಸಂವಿಧಾನ ವಿರೋಧಿ ನಡೆ: ಸಿ.ಟಿ.ರವಿ ಕಿಡಿ

