ರೀಲ್ಸ್ ಗೀಳು – ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವು

1 Min Read

ಲಕ್ನೋ: ರೀಲ್ಸ್ (Reels) ಮಾಡಲು ಹೋಗಿ ಕುತ್ತಿಗೆಗೆ ಹಾಕಿದ್ದ ಕುಣಿಕೆ ಬಿಗಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಬಂಡಾ (Banda) ಜಿಲ್ಲೆಯಲ್ಲಿ ನಡೆದಿದೆ.

ಮೋಹಿನಿ (27) ಮೃತ ಮಹಿಳೆ. ಮೋಹಿನಿ ನೇಣು ಹಾಕಿಕೊಳ್ಳುವ ದೃಶ್ಯವೊಂದನ್ನು ರೀಲ್ಸ್ ಮಾಡುತ್ತಿದ್ದಳು. ಸ್ಟೂಲ್‌ನಲ್ಲಿ ನಿಂತು ಕುತ್ತಿಗೆಗೆ ನೇಣು ಹಾಕಿಕೊಂಡ ಸಂದರ್ಭ ಸ್ಟೂಲ್‌ನಿಂದ ಆಯತಪ್ಪಿ ಕುಣಿಕೆ ಬಿಗಿಯಾಗಿ ಮೋಹಿನಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ದೇಶದಲ್ಲೇ ʻನಮ್ಮ ಮೆಟ್ರೋʼ ಬಲು ದುಬಾರಿ; ಟಿಕೆಟ್ ದರ ವಿಚಾರದಲ್ಲೂ ರಾಜ್ಯ-ಕೇಂದ್ರದ ಸಂಘರ್ಷ

ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಗೆ ಪ್ರವೇಶಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿದ್ದ ತಾಯಿಯನ್ನು ನೋಡಿ ಬಾಲಕಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಬಾಲಕಿಯ ಕೂಗು ಕೇಳಿ ನೆರೆಹೊರೆಯವರು ಒಳಗೆ ಧಾವಿಸಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕುಣಿಕೆಯಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ರೀಲ್ಸ್ ಮಾಡುವ ವೇಳೆ ಆಕಸ್ಮಿಕವಾಗಿ ಕುಣಿಕೆ ಬಿಗಿದು ಸಾವು ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ ಎಂದ ಪ್ರಧಾನಿ – ಯಾರಿಗೇನು ಲಾಭ?

Share This Article