ಬೌಂಡರಿ, ಸಿಕ್ಸರ್‌ನಲ್ಲಿ 150 ರನ್‌ – ಸೂರ್ಯವಂಶಿಯ ಸ್ಫೋಟಕ ಆಟಕ್ಕೆ ವಿಶ್ವದಾಖಲೆ ಪುಡಿ ಪುಡಿ

2 Min Read

ಹರಾರೆ: ಐಸಿಸಿ ಅಂಡರ್‌ 19 ವಿಶ್ವಕಪ್‌ (ICC U19 World Cup) ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ವೈಭವ್‌ ಸೂರ್ಯವಂಶಿ ಸ್ಫೋಟಕ ಶತಕ ಸಿಡಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಇಂದಿನ ಪಂದ್ಯದಲ್ಲಿ ಸೂರ್ಯವಂಶಿ (Vaibhav Suryavanshi) 175 ರನ್‌ ಹೊಡೆದಿದ್ದಾರೆ. ಈ ಮೂಲಕ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಪುರುಷರ ಅಥವಾ ಮಹಿಳೆಯರ ವಿಭಾಗ ಮತ್ತು ವಯೋಮಾನದ ಎಲ್ಲಾ ವಿಭಾಗಗಳಲ್ಲಿ ದಾಖಲಾದ ಅತ್ಯಧಿಕ ಸ್ಕೋರ್‌ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

2023 ರಲ್ಲಿ ಸೌತಾಂಪ್ಟನ್‌ನಲ್ಲಿ ಭಾರತ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ 174 ಎಸೆತಗಳಲ್ಲಿ 163 ರನ್ ಗಳಿಸಿದ್ದು ಹಿಂದಿನ ಅತ್ಯುತ್ತಮ ಮೊತ್ತವಾಗಿತ್ತು. ಇದನ್ನೂ ಓದಿ: ಹಿಂದಿನ ದಿನ 103 ಡಿಗ್ರಿ ಜ್ವರ, ಮರುದಿನ ಸ್ಫೋಟಕ ಬ್ಯಾಟಿಂಗ್‌ – ಸ್ಮೃತಿಯ ಬೆಂಕಿ ಆಟ, ಆರ್‌ಸಿಬಿ ಚಾಂಪಿಯನ್‌

ಟೂರ್ನಿಯಲ್ಲಿ ಸೂರ್ಯವಂಶಿ ಒಟ್ಟು 439 ರನ್‌ ಹೊಡೆದಿದ್ದಾರೆ. ಇಂಗ್ಲೆಂಡ್‌ ಬೆನ್ ಮೇಸ್ 399 ರನ್‌ ಹೊಡೆದಿದ್ದರೆ ಶ್ರೀಲಂಕಾದ ವಿರನ್‌ ಚಮುದಿತ 310 ರನ್‌ ಬಾರಿಸಿದ್ದಾರೆ.

ಭಾರತದ ಪರ ವೇಗದ ಶತಕ ಹೊಡೆದ ದಾಖಲೆಯನ್ನು ಸೂರ್ಯವಂಶಿ ನಿರ್ಮಿಸಿದ್ದಾರೆ. ಸೂರ್ಯವಂಶಿ 55 ಎಸೆತಗಳಲ್ಲಿ ಶತಕ ಹೊಡೆದರೆ ರಾಜ್‌ ಅಂಗಡ ಬಾವ 2022 ರಲ್ಲಿ ಉಗಾಂಡ ವಿರುದ್ಧ 69 ಎಸೆತಗಳಲ್ಲಿ ಶತಕ ಹೊಡೆದಿದ್ದರು.

ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಸೂರ್ಯವಂಶಿ ತಂಡದ ಮೊತ್ತ 251 ರನ್‌ ಆಗಿದ್ದಾಗ 175 ರನ್‌ (80 ಎಸೆತ, 15 ಬೌಂಡರಿ, 15 ಸಿಕ್ಸ್‌) ಸಿಡಿಸಿ ಔಟಾದರು. ಇದನ್ನೂ ಓದಿ: WPL 2026 Final – ದಾಖಲೆಯೊಂದಿಗೆ ಇತಿಹಾಸ ಸೃಷ್ಟಿಸಿದ ಸ್ಮೃತಿ

ಸೂರ್ಯವಂಶಿ 32 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 55 ಎಸೆತಗಳಲ್ಲಿ ಶತಕ ಹೊಡೆದರು. ಶತಕದ ನಂತರ ಕೇವಲ 25 ಎಸೆತಗಳಲ್ಲಿ 75 ರನ್‌ ಹೊಡೆದರು. ಇದನ್ನೂ ಓದಿ: ರಾಧಾ ಯಾದವ್‌ ಹಿಟ್‌ ವಿಕೆಟ್‌ ಆಗಿದ್ರಾ? ಯಾಕೆ ಇಷ್ಟೊಂದು ಚರ್ಚೆ?

ಸೂರ್ಯವಂಶಿ ಎರಡನೇ ವಿಕೆಟಿಗೆ ಮ್ಹಾತ್ರೆ ಜೊತೆಗೆ 90 ಎಸೆತಗಳಲ್ಲಿ 142 ರನ್‌ ಜೊತೆಯಾಟವಾಡಿದ್ದರು. ಈ ಆಟದಲ್ಲಿ ಸೂರ್ಯವಂಶಿ 39 ಎಸೆತಗಳಲ್ಲಿ 87 ರನ್‌ ಹೊಡೆದಿದ್ದರು.

ಮೂರನೇ ವಿಕೆಟಿಗೆ ವೇದಂತ್‌ ತ್ರಿವೇದಿ ಜೊತೆ 39 ಎಸೆತಗಳಲ್ಲಿ 89 ರನ್‌ ಚಚ್ಚಿದ್ದರು. ಇದರಲ್ಲಿ ವೈಭವ್‌ ಸೂರ್ಯವಂಶಿ 28 ಎಸೆತಗಳಲ್ಲಿ ಸ್ಫೋಟಕ 78 ರನ್‌ ಬಾರಿಸಿದ್ದರು.

Share This Article