ಮೆಟ್ರೋ ಆಯ್ತು ಈಗ ಕಾವೇರಿ ನೀರಿನ ದರವೂ ಏರಿಕೆ

1 Min Read

ಬೆಂಗಳೂರು: ನಮ್ಮ ಮೆಟ್ರೋ (Namma Metro) ದರ ಏರಿಕೆಯಾದ ಬೆನ್ನಲ್ಲೇ ಈಗ ಕಾವೇರಿ ನೀರಿನ (Cauvery Water) ದರವೂ ಏರಿಕೆಯಾಗಲಿದೆ.

ಶೀಘ್ರವೇ 3% ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ವರ್ಷ ನೀರಿನ ದರ ಏರಿಕೆ ಆಗಬೇಕು ಎಂದು ಆಡಳಿತ ಸುಧಾರಣಾ ಸಮಿತಿ ಶಿಫರಾಸ್ಸು ಮಾಡಿತ್ತು. ಇದನ್ನೂ ಓದಿ: ಮೆಟ್ರೋ ಪ್ರಯಾಣ ದರ 5% ಏರಿಕೆ – ಫೆ.9 ರಿಂದ ಜಾರಿ

ಈ ಶಿಫಾರಸಿನ ಅನ್ವಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನೀರಿನ ದರವನ್ನು ಏರಿಕೆ ಮಾಡಲು ಮುಂದಾಗಿದೆ. ಏಪ್ರಿಲ್1‌ ರಿಂದ ನೀರಿನ ದರ ಏರಿಕೆಯಾಗುವ ಸಾಧ್ಯತೆಯಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ಗೆ ಕನಿಷ್ಠ 0.15 ಪೈಸೆ ಗರಿಷ್ಠ 1 ಪೈಸೆ ಹೆಚ್ಚಳ ಮಾಡಿದ್ದರೆ ವಾಣಿಜ್ಯ ಬಳಕೆಗೆ ಪ್ರತಿ ಲೀಟರ್ ಗರಿಷ್ಠ 1.90 ಪೈಸೆಯವರೆಗೆ ಏರಿಕೆ ಮಾಡಲಾಗಿತ್ತು.

Share This Article