ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್ – ಜೆಡಿಎಸ್ ಮುಖಂಡೆ ಪುತ್ರ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ

1 Min Read

ಕಾರವಾರ: ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಆರೋಪಿ ಹಾಗೂ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನನ್ನು ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ಕಾರವಾರದ ನ್ಯಾಯಾಧೀಶ ಧನರಾಜ್ ಅವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶಿಸಿದ್ದಾರೆ. ಅಲ್ಲದೇ, ವಿಚಾರಣೆಗೆ ಫೆ.5ಕ್ಕೆ ಮುಂದೂಡಿದ್ದಾರೆ. ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌; ಕದ್ರಾ ಠಾಣೆ PSI ಅಮಾನತು

ಜ.10 ರಂದು ಕಾರವಾರದ ಕದ್ರಾದಲ್ಲಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ರಿಶೇಲ್ ಕುಟುಂಬ ದೂರು ನೀಡಿತ್ತು. ಆರೋಪಿ ಚಿರಾಗ್ ಜೆಡಿಎಸ್‌ನ ಧುರೀಣೆ ಚೈತ್ರಾ ಕೊಠಾರಕರ್ ಪುತ್ರ. ಘಟನೆ ಬೆನ್ನಲ್ಲೇ ಚೆನ್ನೈಗೆ ಪರಾರಿಯಾಗಿದ್ದ.

21 ದಿನದ ನಂತರ ಜಿರಾಗ್‌ನನ್ನು ಚೆನ್ನೈನಿಂದ ಬಂಧಿಸಿ ಕದ್ರಾ ಪೊಲೀಸರು ಕರೆತಂದಿದ್ದರು. ರಿಶೇಲ್ ಡಿಸೋಜಾ ಪ್ರಕರಣ ಸೂಕ್ತ ತನಿಖೆಗೆ ಆಗ್ರಹಿಸಿ ಕ್ರಿಶ್ಚಿಯನ್ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿತ್ತು . ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಕಳೆದ ಐದು ದಿನದ ಹಿಂದೆ ಚಿರಾಗ್‌ಗೆ ಐದು ದಿನ ಕಸ್ಟಡಿಗೆ ವಹಿಸಲಾಗಿತ್ತು. ಇದೀಗ ಎರಡು ದಿನ ಕಸ್ಟಡಿ ಮುಂದುವರಿಕೆ ಮಾಡಲಾಗಿದೆ.‌ ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ ಕೇಸ್‌ – ಆರೋಪಿ ಎಸ್ಕೇಪ್‌

Share This Article