ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ (West Bengal Election) ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ (Election) ಆರಂಭವಾಗಿದೆ.
ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಪಶ್ಚಿಮ ಬಂಗಾಳದ 7 ಜಿಲ್ಲೆಗಳ 142 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸುಮಾರು 3.22 ಕೋಟಿ ಮತದಾರರು ಇಂದು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ
ಎಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ?
ಉತ್ತರ 24 ಪರಗಣ (33), ದಕ್ಷಿಣ 24 ಪರಗಣ (31), ಹೂಗ್ಲಿ (18), ನಡಿಯಾ (17), ಹೌರಾ (16), ಪೂರ್ವ ಬರ್ಧಮಾನ್ (16), ಕೋಲ್ಕತ್ತಾ (11) ಜಿಲ್ಲೆಗಳಲ್ಲಿ ಮತದಾನ ಆರಂಭವಾಗಿದೆ.
#WATCH | West Bengal Elections 2026 | Voters form long queues as they await their turn to cast a vote in the second and final phase of the state assembly elections. pic.twitter.com/A69FrBYH6u
— ANI (@ANI) April 29, 2026
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮತ್ತು ಬಿಜೆಪಿ ನಾಯಕ ಸುವೇಂದು ಅಧಿಕಾರಿ(Suvendu Adhikari) ನಡುವಿನ ಪೈಪೋಟಿಯಿಂದಾಗಿ ಭವಾನಿಪುರ ಕ್ಷೇತ್ರವು ಈ ಹಂತದ ಪ್ರಮುಖ ಆಕರ್ಷಣೆಯಾಗಿದೆ. ಇದನ್ನೂ ಓದಿ: ಇದು ನನ್ನ ಕೊನೆಯ ರ್ಯಾಲಿ, ಫಲಿತಾಂಶದ ನಂತರ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ: ಪ್ರಧಾನಿ ಮೋದಿ
ಇಂದು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದ್ದು, ಸಂಜೆ 6:30ರ ನಂತರ ಎಕ್ಸಿಟ್ ಪೋಲ್ (Exit Poll) ಅಂಕಿಅಂಶಗಳು ಪ್ರಕಟವಾಗಲಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದ್ದು, ರಾಜ್ಯದ ಇತಿಹಾಸದಲ್ಲೇ ದಾಖಲೆಯ ಶೇ. 93.19ರಷ್ಟು ಮತದಾನವಾಗಿತ್ತು.ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

