7 ಸಾವಿರ ಆಸ್ತಿಗಳ ಹರಾಜಿಗೆ ಮುಂದಾದ ಜಿಬಿಎ

1 Min Read

ಬೆಂಗಳೂರು: ತೆರಿಗೆ ಬಾಕಿ ಪಾವತಿಸದ ಮಾಲೀಕರ 7 ಸಾವಿರ ಆಸ್ತಿಗಳನ್ನು (Property) ಹರಾಜು ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯಿದೆ.  ಇದನ್ನೂ ಓದಿ: ʻಮೋದಿ ದೇಶದ್ರೋಹಿʼ ಎಂದ ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್; ಪರಿಷತ್‌ನಲ್ಲಿ ಗದ್ದಲ – ಕೋಲಾಹಲ


ತೆರಿಗೆ ಪಾವತಿಸದ್ದಕ್ಕೆ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಜಾರಿ ಮಾಡಲಾಗಿತ್ತು. ನೋಟಿಸ್‌ ಜಾರಿ ಮಾಡಿಯೂ ತೆರಿಗೆ ಪಾವತಿಸದ್ದಕ್ಕೆ ಜಪ್ತಿ ಮಾಡುವ ಆದೇಶ ಪ್ರಕಟವಾಗಿದೆ.

ಜಪ್ತಿ ಆದೇಶಗಳ ಬಳಿಕವೂ ತೆರಿಗೆ ಪಾವತಿಸಿದೇ ಇದ್ದರೆ ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಜಾಗಗಳಲ್ಲಿ ಹರಾಜು ಹಾಕಲಾಗುತ್ತದೆ.

Share This Article