ಪ್ರಧಾನಿ ಮೋದಿಗೆ ಟ್ರಂಪ್‌ ಫೋನ್‌ ಕಾಲ್‌ – ಬಿಗ್‌ ಟ್ರೇಡ್‌ ಡೀಲ್‌ ಸುಳಿವು ಕೊಟ್ಟ ಅಮೆರಿಕದ ರಾಯಭಾರಿ!

1 Min Read

ವಾಷಿಂಗ್ಟನ್‌/ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ಎಂದು ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಹೇಳಿದ್ದಾರೆ. ಈ ಮೂಲಕ ಭಾರತ ಮತ್ತು ಅಮೆರಿಕ ನಡುವೆ ಉನ್ನತ ಮಟ್ಟದ ವ್ಯಾಪಾರ ಒಪ್ಪಂದದ ಸುಳಿವು ಕೊಟ್ಟಿದ್ದಾರೆ.

ಪ್ರಧಾನಿ ಮೋದಿ – ಟ್ರಂಪ್‌ ನಡುವಿನ ಮಾತುಕತೆ ಬಗ್ಗೆ ಭಾರತದ ಅಮೆರಿಕ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾದ ವಿಶೇಷ ರಾಯಭಾರಿ ಸೆರ್ಗಿಯೋ ಗೋರ್‌, ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆದ್ರೆ ಚರ್ಚೆಯ ಮಾಹಿತಿಯನ್ನ ಬಹಿರಂಗಪಡಿಸಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ ʻStay tunedʼ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಬ್ಬರ ಫೋಟೋ ಹಂಚಿಕೊಂಡಿದ್ದಾರೆ.

ಟ್ರಂಪ್‌ ಟ್ರುತ್‌ ಸೋಷಿಯಲ್‌ ನಲ್ಲಿ ಏನಿದೆ?
ಇನ್ನೂ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್‌ ಸೋಷಿಯಲ್‌ ನಲ್ಲಿ ಭಾರತದ ಮುಖ್ಯವಾಹಿತಿನಿಯ ಮ್ಯಾಗಜಿನ್‌ವೊಂದರ ಮುಖಪುಟ ಹಂಚಿಕೊಂಡಿದ್ದಾರೆ.

2025ರ ಫೆಬ್ರವರಿ 13 ರಂದು ಪ್ರಧಾನಿ ಮೋದಿ ಅವರು ಶ್ವೇತಭವನದಲ್ಲಿ ಕೊನೆಯ ಬಾರಿಗೆ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿವೆ. ಇತ್ತೀಷೆಗೆ ದಾವೋಸ್‌ನಲ್ಲೂ ಟ್ರಂಪ್‌ ಅವರಿಗೆ ಭಾರತದ ಬಗ್ಗೆ ಕೇಳಿದ್ದಾಗಲೂ ಮೋದಿ ನನ್ನ ಉತ್ತಮ ಸ್ನೇಹಿತ, ಒಪ್ಪಂದ ಸನ್ನಿಹಿತವಾಗಿದೆ ಎಂದೇ ಹೇಳಿದ್ದರು. ಜೊತೆಗೆ ಈ ವರ್ಷದಲ್ಲಿ ಭಾರತ ಭೇಟಿಯ ಬಗ್ಗೆ ಸುಳಿವು ಕೊಟ್ಟಿದ್ದರು.

Share This Article