– ಸಿಎಂ ಮುಂದೆಯೇ ಗಲಾಟೆ; ಕ್ಷಮೆ ಕೇಳುವಂತೆ ಬಿಜೆಪಿ ಬಿಗಿ ಪಟ್ಟು
ಬೆಂಗಳೂರು: ʻಪ್ರಧಾನಿ ನರೇಂದ್ರ ಮೋದಿ ದೇಶದ್ರೋಹಿʼ ಎನ್ನುವ ಕಾಂಗ್ರೆಸ್ ಸದಸ್ಯ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್ (Naseer Ahmed) ಅವರ ಹೇಳಿಕೆ ವಿಧಾನ ಪರಿಷತ್ನಲ್ಲಿ (Legislative Council) ಭಾರೀ ಗದ್ದಲ ಸೃಷ್ಟಿಸಿತು.
ಮನರೇಗಾ vs ವಿಬಿ-ಜಿರಾಮ್ಜಿ (VBGRAMG) ಕುರಿತ ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ʻಪ್ರಧಾನಿ ಮೋದಿ ದೇಶದ್ರೋಹಿʼ ಎಂದು ಹೇಳಿದರು. ಇದಕ್ಕೆ ಸಿಡಿದ ಬಿಜೆಪಿ ಸದಸ್ಯರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ರು. ಕಾಂಗ್ರೆಸ್ ವಿರುದ್ಧದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. ಬಳಿಕ ʻಪ್ರಧಾನಿ ಮೋದಿ ದೇಶದ್ರೋಹಿʼ ಎಂಬ ಪದವನ್ನ ಕಡತದಿಂದ ಸಭಾಪತಿಗಳು ತೆಗೆದುಹಾಕಿದರು. ಆದಾಗ್ಯೂ ಆಕ್ರೋಶಭರಿತರಾದ ಬಿಜೆಪಿ ಸದಸ್ಯರು ಸದನದ ಬಾವಿಗೊಳಿಸಿದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಫ್ಯೂಯಲ್ ಕಂಟ್ರೋಲ್ ಸ್ವಿಚ್ನಲ್ಲಿ ದೋಷ; ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟ ಸ್ಥಗಿತ
ಈ ವೇಳೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ತೆರಿಗೆ ಕೊಡದಿದ್ರೆ, ಅನ್ಯಾಯ ಆಗಿದ್ದರೆ ಹೇಳಲಿ. ಆದ್ರೆ ಸಭಾಪತಿಗಳು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪ್ರಧಾನಿಗಳನ್ನ ದೇಶದ್ರೋಹಿ ಅನ್ನೋದು ಸರಿಯಲ್ಲ. ನಜೀರ್ ಅಹಮದ್ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದರು.
ಇತ್ತ ಕಾಂಗ್ರೆಸ್ ಸದಸ್ಯರು ಬಿಜೆಪಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು. ಬಿಜೆಪಿ-ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ರಾಜ್ಯಪಾಲರು ವಂದನಾ ನಿರ್ಣಯ ಅಂಗೀಕರಿಸಿದರು. ಮಂಗಳವಾರ (ಫೆ.2) ಬೆಳಗ್ಗೆ 11 ಗಂಟೆಗೆ ಮುಂದೂಡಿದರು. ಇದನ್ನೂ ಓದಿ: ಬಂಗ ಭವನದಲ್ಲಿ ಎಸ್ಐಆರ್ ಸಂತ್ರಸ್ತ ಕುಟುಂಬಗಳ ಮೇಲೆ ದೌರ್ಜನ್ಯ: ಮಮತಾ ಬ್ಯಾನರ್ಜಿ




