ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡ್ತೀವಿ: ಸಿದ್ದರಾಮಯ್ಯ

1 Min Read

ರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಹಳ ಹೆಚ್ಚು ಅಂದ್ರೆ ಎರಡು ತಿಂಗಳಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಯಚೂರಿನ ದೇವದುರ್ಗದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದಲ್ಲಿ ಆಯೋಜಿಸಿದ್ದ ಸಿದ್ದರಾಮನಂದ ಸ್ವಾಮಿ ಪುಣ್ಯಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವರದಿ ಕೊಟ್ಟ ನಂತರ ನಮ್ಮ ಸರ್ಕಾರ ಚರ್ಚೆ ಮಾಡಿ ಅಂಗಿಕಾರ ಮಾಡುತ್ತದೆ. ಇದನ್ನೂ ಓದಿ: ಕರ್ನಾಟಕಕ್ಕೆ ಒಂದು ಚೊಂಬು ಕೊಟ್ಟಿದ್ದಾರೆ: ಬಜೆಟ್‌ನಿಂದ ಅನ್ಯಾಯ ಆಗಿದೆ ಎಂದ ಸಿದ್ದರಾಮಯ್ಯ

ಕುರುಬ ಸಮಾಜವನ್ನ ಎಸ್‌ಟಿಗೆ ಸೇರಿಸುವ ವಿಚಾರವಾಗಿ ಎಸ್‌ಸಿ, ಎಸ್‌ಟಿಗೆ ಸೇರಿಸುವುದು ಕೇಂದ್ರ ಸರ್ಕಾರ. ನಾವು ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇನೆ. ತಿರಸ್ಕಾರವಾಗಿದ್ದಕ್ಕೆ ಪುನಃ ಸ್ಪಷ್ಟೀಕರಣ ಸಹಿತ ಮತ್ತೆ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಿದ್ದೇನೆ. ನಾನು ಮಾಡುವುದಿದ್ದರೆ ಮಾಡಿ ಬಿಸಾಕುತ್ತಿದ್ದೆ.

ನಾನು ಅಧಿಕಾರದ ಹಿಂದೆ ಬಿದ್ದವನಲ್ಲ ಹೋರಾಟ ಮಾಡಿಕೊಂಡು ಬಂದವನು. ಶಕ್ತಿ ಇರುವ ತನಕ ರಾಜಕೀಯ ಮಾಡುತ್ತೇನೆ. ಧ್ವನಿಯಿಲ್ಲದವರಿಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ ಎಂದರು.

ನಾನು ಸಿಎಂ ಆಗಿದ್ದಾಗಲೂ ಕನಕಗುರುಪೀಠಕ್ಕೆ ಬಂದಿದ್ದೇನೆ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಬಂದಿದ್ದೇನೆ. ಜನ ನನನ್ನ ಪ್ರೀತಿಸುತ್ತಾರೆ ಅದಕ್ಕೆ ನಾನು ರಾಜಕೀಯದಲ್ಲಿ ಬದುಕುತ್ತಿದ್ದೇವೆ. ಜನರ ಪ್ರೀತಿಯಿಂದಲೇ 8 ಬಾರಿ ಗೆದ್ದು, ಸಿಎಂ ಆಗಿದ್ದೇನೆ. ಎಲ್ಲರೂ ಪ್ರೀತಿಸುತ್ತಿರುವುದರಿಂದಲೇ ಬದುಕಿದ್ದೇನೆ. ಇಲ್ಲಿರುವವರು, ಎಲ್ಲರೂ ನನ್ನ ಪ್ರೀತಿಸುತ್ತಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಕುರುಬರು ಎನ್ನುವುದನ್ನ ಮರೆಯಬಾರದು. ಎಲ್ಲರಿಗೂ ಶಿಕ್ಷಣ ಸಿಕ್ಕ ಮೇಲೆ ಒಂದಾಗಬೇಕು ಎಂದು ಕರೆಕೊಟ್ಟರು. ಇದನ್ನೂ ಓದಿ: ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು, ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್‌ಡಿಕೆ

Share This Article