BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ

2 Min Read

ಬಿಗ್‌ ಬಾಸ್‌ (Bigg Boss Kannada) ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್‌ ಅನುಪಸ್ಥಿತಿಯಲ್ಲಿ ಅಚ್ಚರಿ ಎಲಿಮಿನೇಷನ್‌ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಅನ್ನುತ್ತಿರುವಾಗಲೇ ಸ್ಪರ್ಧಿಗಳಿಗೆ ಬಿಗ್‌ ಬಾಸ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಈ ವಾರ ಡಬಲ್‌ ಎಲಿಮಿನೇಷನ್‌ ಅಂತ ಮೊದಲೇ ಸುಳಿವು ಕೊಟ್ಟಿದ್ದರು, ಅದ್ರಂತೆ ಶನಿವಾರ ಸೂರಜ್‌ ಮನೆಯಿಂದ ಹೊರಹೋಗೊದ್ದರು. ಭಾನುವಾರವಾದ ಇಂದು ಸಹ ಸ್ಪರ್ಧಿ ಮಾಳು ಹೊರಹೋಗಿದ್ದು, ಸ್ಪಂದನಾ (Spandana Somanna) ಸೇಫ್‌ ಆಗಿದ್ದಾರೆ.

ದೊಡ್ಮನೆಗೆ ರಿಟರ್ನ್‌ ಆಗ್ತಿದ್ದಂತೆ, ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಕಣ್ಣೀರಿಟ್ಟಿದ್ದಾರೆ. ಬಳಿಕ ಬಿಗ್‌ ಬಾಸ್‌ ಮಾತನಾಡೋಕೆ ಅವಕಾಶ ನೀಡಿದಾಗ ಕಣ್ಣೀರಿಡುತ್ತಲೇ ಮಾತನಾಡಿದ್ದಾರೆ. ಇದನ್ನೂ ಓದಿ: BBK 12: ಬಿಗ್‌ಬಾಸ್‌ ಮನೆಯಿಂದ ಮಾಳು ಔಟ್‌ – ಸ್ಪಂದನಾ ಸೇಫ್‌!

ಬೆಂಗಳೂರಿಗೆ ನಾವು ಬಂದಾಗ ಉಳಿಯೋಕೂ ಜಾಗ ಇರಲಿಲ್ಲ. ಇವತ್ತು ಇಷ್ಟು ದೊಡ್ಡ ಜಾಗಕೊಟ್ಟು ಉಳಿಸಿರೋದಕ್ಕೆ ಬಿಗ್‌ ಬಾಸ್‌ಗೆ ಥ್ಯಾಂಕ್ಸ್‌ ಹೇಳ್ತೀನಿ. ನನ್ನನ್ನ ಕಂಟಿನ್ಯೂ ಮಾಡೋಕೆ ವೋಟ್‌ ಮಾಡಿದವರಿಗೂ ಥ್ಯಾಂಕ್ಸ್‌ ಹೇಳೋಕೆ ಇಷ್ಟಪಡ್ತೀನಿ ಅಂದ್ರು. ಆಮೇಲೆ ನಗು ನಗುತ್ತಾ ಮನೆಯೊಳಗೆ ಸೇರಿಕೊಂಡರು.

ಅಲ್ಲದೇ ಧನುಷ್‌ ಜೊತೆಗೂ ಮಾತನಾಡ್ತಾ…. ಎಷ್ಟೊಂದು ಕಾರಲ್ಲಿ ಕೂತಾಗ ಎಷ್ಟೊಂದು ಭಯ ಆಯ್ತು ಗೊತ್ತಾ ಅಂದ್ರು. ಅದಕ್ಕೆ ಕಿಚಾಯಿಸಿದ ಧನುಷ್‌, ಈಗೇನ್‌ ಹೋಗ್ತಿಯಾ? ಹೋಗೋದಾದ್ರೆ ಹೋಗು, ಇಲ್ಲಾ ಅಂದ್ರೆ ಒಳಗೆ ಬಾ ಅಂತ ಕರೆದ್ರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿ ಅನುಪಮಾ ಗೌಡ ಎಂಟ್ರಿ

ಈ ವಾರ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್‌ ನಡೆಯಿತು. ಸುದೀಪ್‌ ಬದಲಿಗೆ ಮಾಜಿ ಸ್ಪರ್ಧಿ, ನಟಿ ಅನುಪಮಾ ಗೌಡ ಅವರು ಬಿಗ್​​ಬಾಸ್ ಮನೆಗೆ ಬಂದು ಸ್ಪರ್ಧಿಗಳೊಟ್ಟಿಗೆ ಕೆಲ ಕಾಲ ಫನ್ ಆಕ್ಟಿವಿಟಿ ಮಾಡಿಸಿದ್ರು. ಈ ಬಾರಿ ನಾಮಿನೇಷನ್​​ನಲ್ಲಿದ್ದ ಸ್ಪರ್ಧಿಗಳಲ್ಲಿ ಕೆಲವರನ್ನ ನಾಮಿನೇಷನ್​​ನಿಂದ ಕಾಪಾಡಲು ಆಕ್ಟಿವಿಟಿ ಮಾಡಿಸಲಾಯ್ತು. ಕಾಫಿ ಕಪ್ ಆಕ್ಟಿವಿಟಿ, ಕೈಗೆ ಬಣ್ಣ ಮೆತ್ತುವ ಆಕ್ಟಿವಿಟಿಗಳನ್ನ ಆಡಿಸುವ ಮೂಲಕ ಈ ವಾರ ಬಚಾವಾದವರನ್ನ ಘೋಷಿಸಲಾಯ್ತು. ಅವುಗಳಲ್ಲಿ ರಾಶಿಕಾ, ಧ್ರುವಂತ್, ರಕ್ಷಿತಾ ಇನ್ನೂ ಕೆಲವರು ಬಚಾವಾದರು.

ಅಂತಿಮವಾಗಿ ಸ್ಪಂದನಾ ಮತ್ತು ಮಾಳು ಉಳಿದುಕೊಂಡರು. ಬಳಿಕ ಬಿಗ್​​ಬಾಸ್ 2 ಕಾರುಗಳನ್ನು ಕರೆಸಿ, ಮಾಳು ಮತ್ತು ಸ್ಪಂದನಾ ತಲಾ ಒಂದು ಕಾರಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಂತೆಯೇ ಮಾಳು ಮತ್ತು ಸ್ಪಂದನಾ ಕಾರುಗಳಲ್ಲಿ ಕುಳಿತರು. ಎರಡೂ ಕಾರುಗಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದವು. ಆದರೆ ವಾಪಸ್ಸಾಗಿದ್ದು ಕೇವಲ ಒಂದು ಕಾರು. ಆ ಕಾರಿನಿಂದ ಸ್ಪಂದನಾ ಕೆಳಗೆ ಇಳಿದರು. ಆ ಮೂಲಕ ಮಾಳು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋದಂತಾಯ್ತು. ಇದನ್ನೂ ಓದಿ: ಮಲೇಷಿಯಾದಲ್ಲಿ ಇತಿಹಾಸ ಸೃಷ್ಟಿಸಿದ ‘ಜನನಾಯಕನ್’ ಆಡಿಯೋ ಲಾಂಚ್ – ದಾಖಲೆ ಬರೆದ ದಳಪತಿ ವಿಜಯ್ ಫ್ಯಾನ್ಸ್‌!

Share This Article