ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

1 Min Read

ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಕೊಪ್ಪಳದ (Koppal) ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ (Anjanadri Hills) ರಿಷಬ್ ಶೆಟ್ಟಿ (Rishab Shetty) ದಂಪತಿ ಇಂದು ಭೇಟಿ ನೀಡಿದರು.

ದಂಪತಿ ಸಮೇತ ಅಂಜನಾದ್ರಿ ಬೆಟ್ಟಕ್ಕೆ ಭೇಟಿಯನ್ನು ನೀಡಿದ ರಿಷಬ್ ಶೆಟ್ಟಿ ಬೆಟ್ಟದ 575 ಮೆಟ್ಟಿಲುಗಳನ್ನು ಏರುವ ಮೂಲದ ದೇವರ ದರ್ಶನ ಪಡೆದುಕೊಂಡರು. ಕಾಂತಾರ ಚಿತ್ರ ಯಶಸ್ವಿ ಕಂಡಿರುವ ಕಾರಣಕ್ಕೆ ಅಂಜನಾದ್ರಿಗೆ ಭೇಟಿ ನೀಡಿ, ಹನುಮನ ದೇವರಿಗೆ ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಪೂಜೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಬಾಂಗ್ಲಾದೇಶ ಬಿಕ್ಕಟ್ಟು ಮತ್ತಷ್ಟು ತೀವ್ರ – ಢಾಕಾದಲ್ಲಿ ಸ್ಫೋಟ; ಓರ್ವ ಸಾವು

ನಂತರ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರು ರಿಷಬ್ ಶೆಟ್ಟಿಯವರಿಗೆ ಸನ್ಮಾನಿಸಿ, ಗೌರವಿಸಿದರು. ನಂತರ ನಟ ರಿಷಬ್ ಶೆಟ್ಟಿಯವರು ಬೆಟ್ಟದ ಮೇಲಿಂದ ತುಂಗಭದ್ರಾ ನದಿ, ವಿಜಯನಗರದ ಹಂಪಿ ಸೇರಿದಂತೆ ಕಿಷ್ಕಿಂದ ಭಾಗದ ಬೆಟ್ಟದ ಸಾಲುಗಳನ್ನು ವೀಕ್ಷಣೆ ಮಾಡಿದರು. ಇದನ್ನೂ ಓದಿ: ಗ್ಯಾರಂಟಿಗಾಗಿ 569 ಮದ್ಯದಂಗಡಿಗಳಿಗೆ ಇ-ಹರಾಜು ಲೈಸೆನ್ಸ್ – 700 ಕೋಟಿ ಆದಾಯ ಸಂಗ್ರಹ ಗುರಿ

Share This Article