ದೇವರ ಹಾಡು ಹಾಡಿದ್ದನ್ನು ಆಕ್ಷೇಪಿಸಿ ಗಾಯಕಿ ಲಗ್ನಜಿತಾ ಚಕ್ರವರ್ತಿಗೆ ಕಿರುಕುಳ – ಆರೋಪಿ ಅರೆಸ್ಟ್

1 Min Read

ಕೋಲ್ಕತ್ತಾ: ಬಂಗಾಳಿ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ದೇವರ ಹಾಡು ಹಾಡಿದ್ದಕ್ಕೆ ವ್ಯಕ್ತಿಯೊಬ್ಬ ಆಕ್ಷೇಪಿಸಿ ಕಿರುಕುಳ ನೀಡಿದ್ದಾನೆ.

ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಗಾಯಕಿ ದೂರಿನ ಆಧಾರದ ಮೇಲೆ, ಕಾರ್ಯಕ್ರಮ ನಡೆದ ಶಾಲೆಯ ಸಹ-ಮಾಲೀಕ, ಪ್ರಮುಖ ಆರೋಪಿ ಮೆಹಬೂಬ್ ಮಲ್ಲಿಕ್ ಎಂಬಾತನನ್ನು ಬಂಧಿಸಲಾಗಿದೆ.ಇದನ್ನೂ ಓದಿ: ನುಸುಳುಕೋರರಿಗೆ ಕಾಂಗ್ರೆಸ್ ರಕ್ಷಣೆ: ಮೋದಿ ವಾಗ್ದಾಳಿ

ಕಾರ್ಯಕ್ರಮದಲ್ಲಿ 45 ನಿಮಿಷ ವಿವಿಧ ಹಾಡುಗಳನ್ನ ಹಾಡಿದ್ದಾರೆ. ನಂತರ ದೇಬಿ ಚೌಧುರಾಣಿ ಎನ್ನುವ ಬಂಗಾಳಿ ಸಿನಿಮಾದ ಜಾಗೋ ಮಾ ಗೀತೆ ಹಾಡಲು ಮುಂದಾಗಿದ್ದರು. ಈ ವೇಳೆ ವೇದಿಕೆ ಏರಿದ ಮೆಹಬೂಬ್ ಮಲ್ಲಿಕ್ ಲಗ್ನಜಿತಾ ಅವರನ್ನು ನಿಂದಿಸಿ ಹೊಡೆಯಲು ಯತ್ನಿಸಿದ್ದಾನೆ. ಜಾಗೋ ಮಾ ಹಾಡಿದ್ದು ಸಾಕು. ಈಗ ಏನಾದರೂ ಸೆಕ್ಯೂಲರ್‌ನಂಥದ್ದು ಹಾಡು ಎಂದಿದ್ದಾನೆ. ಬಳಿಕ ಗಾಯಕಿ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಿ ಪೊಲೀಸರಿಗೆ ದೂರು ನೀಡಿದ್ದು, ಮಲ್ಲಿಕ್‌ನನ್ನು ಅರೆಸ್ಟ್ ಮಾಡಿದ್ದಾರೆ.

Share This Article