ಬಿಗ್‌ಬಾಸ್ 12ರ ಮನೆಗೆ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳಾಗಿ ಅಲ್ಲ. ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದ ರಜತ್ ಹಾಗೂ ಚೈತ್ರಾ ಈಗ ಮನೆಯಿಂದ ಹೊರಬಂದಿದ್ದಾರೆ.
Expect The Unexpected ಎನ್ನುವಂತೆ ಬಿಗ್‌ಬಾಸ್ ಇದೀಗ ಚಮಕ್ ಕೊಟ್ಟಿದ್ದಾರೆ. ಅದರಂತೆ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳು ಎಂದು ಮನೆಯೊಳಗೆ ಬಂದಿದ್ದವರು ಅತಿಥಿಗಳಾಗಿಯೇ ಎಂಟ್ರಿ ಕೊಟ್ಟಿದ್ದಾರೆ ಎಂದು ಬಿಗ್‌ಬಾಸ್ ತಿಳಿಸಿದ್ದಾರೆ.
ಬಿಗ್‌ಬಾಸ್ 11ರ ಸ್ಪರ್ಧಿಯಾಗಿದ್ದ ರಜತ್ ಹಾಗೂ ಚೈತ್ರಾ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳಾಗಿ ಬಂದಿದ್ದರು. ಅದರಂತೆ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲರಿಗೂ ಟಫ್ ಫೈಟ್ ಕೊಟ್ಟಿದ್ದಾರೆ. ಎಲ್ಲರ ಜೊತೆಯೂ ಕಾದಾಡಿ, ಗುದ್ದಾಡಿ ಕ್ಯಾಪ್ಟನ್ ಆಗಿ, ಉಸ್ತುವಾರಿ ಆಗಿಯೂ ಆಟವಾಡಿದ್ದಾರೆ. ಆದರೆ ಸೀಸನ್ ಆರಂಭದಿಂದಲೂ ಹೇಳಿದಂತೆ ಕಳೆದ 11 ಸೀಸನ್‌ಗಳಿಗೂ ಹೋಲಿಸಿದರೆ ಈ ಸೀಸನ್ ಸಂಪೂರ್ಣವಾಗಿ ಬೇರೆಯೇ ಎನ್ನುತ್ತಿದ್ದರು. ಜೊತೆಗೆ ಬಿಗ್‌ಬಾಸ್ ಕೂಡ ಮೊದಲಿನಿಂದಲೂ ಒಂದಿಲ್ಲಲ್ಲೊಂದು ಟ್ವಿಸ್ಟ್ ಕೊಡುತ್ತಲೇ ಇದ್ದರು.
ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಾಗಲೇ ರಕ್ಷಿತಾಳನ್ನು ಮನೆಗೆ ಕಳಿಸಿ, ಒಂದೇ ವಾರದಲ್ಲಿ ವಾಪಸ್ ಕರೆಸಿದ್ದರು. ಬಳಿಕ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆ ಸೇರಿದರು. ಬಳಿಕ ಹಳೆಯ ಗೆಸ್ಟ್‌ಗಳನ್ನು ಕರೆಸಿ, ಅದರಲ್ಲಿ ಇಬ್ಬರನ್ನು ಮತ್ತೆ ವೈಲ್ಡ್ ಕಾರ್ಡ್ ಸದಸ್ಯರು ಎಂದು ಘೋಷಿಸಿದ್ದರು. ಅದರಂತೆ ಇದೀಗ ಆ ಇಬ್ಬರು ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು ಎಂದು ಹೇಳುವ ಮೂಲಕ ಮತ್ತೆ ಆಟವನ್ನೇ ಬದಲಿಸಿದ್ದಾರೆ.
ಇನ್ನೂ ರಜತ್ ಮತ್ತು ಚೈತ್ರಾ ಬಿಗ್‌ಬಾಸ್ ಮನೆಗೆ ಬರುವ ಮುನ್ನವೇ ಈ ಕುರಿತು ಒಪ್ಪಂದವಾಗಿತ್ತು. ಅದರಂತೆ ಈಗ ಮನೆಯಿಂದ ಹೊರಬಂದಿದ್ದಾರೆ. ಅದಕ್ಕೆ ಈ ವಾರ ಯಾವುದೇ ವೋಟಿಂಗ್ ಲೈನ್‌ಗಳು ಓಪನ್ ಇರಲಿಲ್ಲ.



