ಹಾಸನ: ಕಾಂಗ್ರೆಸ್ ಸಿಎಂ ಕುರ್ಚಿ ಕದನ ವಿಚಾರವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತೆ ಸಿಎಂ ಆಗಬೇಕು ಎನ್ನುವ ಮತ್ತೊಂದು ಬಯಕೆ ಇಲ್ಲ. ನಾನು ಬದುಕಿರುವವರೆಗೆ ನನ್ನ ಮೇಲೆ ವಿಶ್ವಾಸ ಇಟ್ಟು ಬರುವ ಬಡವನಿಗೆ ಏನಾದರು ಶಕ್ತಿ ತುಂಬಲು ಸಾಧ್ಯವಿದೆಯೇ ಎಂಬುದೇ ನನ್ನ ಚಿಂತೆಯಾಗಿದೆ. ದೇವರು ಎಲ್ಲಾ ಕೊಟ್ಟಿದ್ದಾನೆ, ನೋಡಿಯಾಗಿದೆ. ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಯಾರ ಕೈಗು ಸಿಗದೆ ಒಂದು ಅರಣ್ಯಕ್ಕೆ ಹೋಗಿ ಗುಪ್ತವಾಗಿ ಇರಬೇಕು ಎನ್ನಿಸಿದೆ ಎಂದರು.
ಏನೆಲ್ಲಾ ಲೂಟಿ ಆದರೂ ಈ ದೇಶ ಬದುಕಿದೆ. ಈಗ ಯಾರು ಲೂಟಿ ಮಾಡ್ತಾ ಇದ್ದಾರೆ. ಈಗಲೂ ಸಂಪತ್ತು, ಎಲ್ಲಾ ಇದೆ. ಇದನ್ನ ತಗೊಂಡು ಏನು ಮಾಡೋಣ? ಯಾವನು ನಿದ್ದೆ ಮಾಡೋಕೆ ಆಗ್ತಿಲ್ಲ. ನಿಮ್ಮ ಲೀಡರ್ ಯಾರೋ ಸಿಎಂ ಆಗ್ಬೇಕು ಅಂತಾನಲ್ಲ ನಿದ್ದೆ ಮಾಡ್ತಾನಾ ಎಂದು ಪರೋಕ್ಷವಾಗಿ ಡಿಕೆಶಿ ಕಾಲೆಳೆದರು. ನನ್ನಲ್ಲಿ ಯಾವುದೇ ಸಣ್ಣತನ ಇಲ್ಲ. ಮುಕ್ತ ತೀರ್ಮಾನ ಮಾಡಲು ಬಿಜೆಪಿ ಜೊತೆ ಸಂಬಂಧ ಬೆಳೆಸಿದೆ. ಕಾಂಗ್ರೆಸ್ ನೋಡಿಯಾಗಿದೆ. ದೇವೇಗೌಡರು ಕಾಂಗ್ರೆಸ್ ನಂಬಿ ಅವರ ಜೀವನ ಹಾಳು ಮಾಡಿಕೊಂಡರು. ದೇವೇಗೌಡರ ಜೀವನ ರಾಜಕೀಯವಾಗಿ ಹಾಳಾಗಲು ಪ್ರಮುಖ ಕಾರಣ ಇದೇ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಇತ್ತೀಚಿಗೆ ಕಾಂಗ್ರೆಸ್ ಲಗ್ಗೆ ಹಾಕಲು ಬಹಳ ವೇಗದಲ್ಲಿ ಇದ್ದಾರೆ. ವೇದಿಕೆ ಅಲಂಕಾರ, ಬಾಣ, ಬಿರಿಸು, ಕಾರ್ಯಕ್ರಮಗಳು ಮಾಡುತ್ತಿದ್ದಾರೆ. ಜಿಲ್ಲೆಗೆ ಯಾರೂ ಮಾಡದೆ ಇರುವ ಅಭಿವೃದ್ಧಿಗೆ ಚಾಲನೆ ಕೊಟ್ಟಿದ್ದೇವೆ. 70 ಸಾವಿರ ಫಲಾನುಭವಿಗಳಿಗೆ ಆರ್ಥಿಕ ನೆರವು ಕೊಟ್ಟಿದ್ದೇನೆ ಎಂಬ ಜಾಹೀರಾತು ಗಮನಿಸಿದ್ದೇನೆ. ಕಾಂಗ್ರೆಸ್ ಕುರ್ಚಿ, ಇಡ್ಲಿ, ವಡೆ, ನಾಟಿ ಕೋಳಿ ತಿಂದಿದ್ದರ ಬಗ್ಗೆ ಮಾತನಾಡಲ್ಲ, ಅದು ನನಗೆ ಮಹತ್ವವಲ್ಲ. ಕಾಂಗ್ರೆಸ್ ಕುರ್ಚಿ ಅಲಂಕರಿಸುವವರು ಈ ರಾಜ್ಯದ ಮುಖ್ಯಮಂತ್ರಿ. ಅದು ನನಗೆ ಅವಶ್ಯಕತೆ ಇಲ್ಲ. 140 ಶಾಸಕರ ಗಡಿ ದಾಟಿದೆ, ನಾಲ್ಕು ತಿಂಗಳು ಕಳೆದರೆ ಸರ್ಕಾರ ಮೂರು ವರ್ಷ ಪೂರೈಸುತ್ತೆ. ಸಾವಿರಾರು ಬಾರಿ ಅವರ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನವೊಲಿಸುವಲ್ಲಿ ನಿಮ್ಮ ಪ್ರಯತ್ನ ಏನು? ಉತ್ತರ ಕರ್ನಾಟಕದಲ್ಲಿ ಧಾರಾಕಾರ ಪ್ರವಾಹ ಬಂದಿತ್ತು. ಬೆಳೆಗಳು ನಾಶವಾದರೂ, ತೊಗರಿ, ಮೆಕ್ಕೆಜೋಳ ಬೆಳೆಗಳಿಗೆ ಎಂಎಸ್‌ಪಿ ದರ ನಿಗದಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಸರ್ಕಾರದ ನಡುವಿನ ಜವಾಬ್ದಾರಿ ಇದೆ. ಎಂಎಸ್‌ಪಿ ದರದಲ್ಲಿ ಖರೀದಿಸಬೇಕು. ಕೆಲವು ಸತ್ಯಾಂಶಗಳನ್ನು ಹೇಳಲು ಆಗಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2400 ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ. ಕಂದಾಯ ಸಚಿವರು ಒಂದು ಸಾವಿರ ಕೋಟಿ ಕೊಡ್ತೀವಿ ಅಂತ ಹೇಳಿದ್ದಾರೆ. ಅತಿವೃಷ್ಟಿಯಿಂದ ಒಂದು ಲಕ್ಷ ಎರಡು ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳುತ್ತಾರೆ. ವೇದಿಕೆ ಮೇಲೆ ಬರೀ ಪೊಳ್ಳು ಹೇಳಿಕೆ ಕೊಟ್ಟುಕೊಂಡು ಎಷ್ಟು ದಿನ ಕಾಲ ಕಳೆಯುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ ಎಂದು ಚರ್ಚೆ ನಡೆಯಿತು. ಸದನದಲ್ಲಿ ಸಚಿವರು ತಪ್ಪು ಮಾಹಿತಿ ನೀಡಿದರು. ಸಚಿವರ ರಾಜೀನಾಮೆ ತೆಗೆದುಕೊಂಡರಾ, ಯಾವುದಾದರು ಅಧಿಕಾರಿ ಸಸ್ಪೆಂಡ್ ಮಾಡಿದ್ರಾ? ಸಿದ್ದರಾಮಯ್ಯ ಅವರೇ ಮಾಹಿತಿ ಕೊರತೆ ಇದೆ ಅಂತಾರೆ. ನೀವು ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು. ಅಮೆರಿಕಾದಲ್ಲೂ ನಿಮ್ಮಂತಹವರು ಇಲ್ಲ. ಅಮೆರಿಕಾದಲ್ಲೂ ನಿಮ್ಮಂತಹ ಫೈನಾನ್ಸ್ ಮಿನಿಸ್ಟರ್ ಸಿಕ್ಕಿಲ್ಲ. ಐದು ಸಾವಿರ ಕೋಟಿ ಎಲ್ಲಿದೆ ಅಂಥ ನಿಮಗೆ ಗೊತ್ತಿಲ್ಲ. ರಾಜಣ್ಣ ಹೇಳುತ್ತಲೇ ಇದ್ದಾರೆ. 34 ಸಾವಿರ ಕೋಟಿ ಹಣವನ್ನು 24 ಸಾವಿರ ರೈತರಿಗೆ ಸಾಲ ಕೊಡ್ತಿವಿ ಅಂಥ ಹೇಳಿದ್ರು. ನವೆಂಬರ್ ತಿಂಗಳವರೆಗೆ 12 ಸಾವಿರ ಕೋಟಿ ಕೊಟ್ಟಿದ್ದಾರೆ. ನಬಾರ್ಡ್ ಹಣ ಕಟ್ ಮಾಡಿದ್ದಾರೆ ಎಂದು ಕಾರಣ ಹೇಳ್ತಾರೆ. 2006-2007, 2018 ರಲ್ಲಿ ನಾನು ರೈತರ ಸಾಲಮನ್ನಾ ಮಾಡಿದೆ. ರೈತರ ಒಂದೊಂದು ಲಕ್ಷ ಸಾಲಮನ್ನಾ ಮಾಡಿ ಹಣ ಕೊಟ್ಟೆ, ಬ್ಯಾಂಕ್‌ಗಳಿಗೆ ಹಣ ನೀಡಿದೆ ಬ್ಯಾಂಕ್‌ಗಳು ಉಳಿದವು. ಎಷ್ಟೆಷ್ಟು ಕೊಟ್ಟಿದ್ದೀನಿ ಎಂದು ಮುಖ್ಯಮಂತ್ರಿಗಳು ಅಂಕಿ-ಅಂಶ ಹೇಳಲಿ, ಶ್ವೇತಪತ್ರ ಹೊರಡಿಸಲಿ. ಈ ಬಾರಿ ಬಜೆಟ್ ನಂತರ ಹತ್ತು ಲಕ್ಷ ಕೋಟಿ ಸಾಲ ರೀಚ್ ಮಾಡ್ತಾರೆ. ಅದೇನೋ ಜಿಬಿಎ ಮಾಡ್ತಿನಿ, ಕನಕಪುರ, ಮಾಗಡಿ ಬೆಂಗಳೂರಿಗೆ ಸೇರುಸ್ತಿನಿ ಅಂಥ. ನನ್ನಿಂದ ಬೆಳೆದ ಚಿಲ್ಲರೆಗಳು ಕುಮಾರಸ್ವಾಮಿ ಏನ್ ಮಾಡವ್ನೆ ಅಂತಾರೆ. ನಾನು ಮಾಡಿರುವ ಕೆಲಸಗಳು ಅವರ ಕಣ್ಣ ಮುಂದೆ ಇವೆ. ಜನರೇ ಮುಂದೆ ತೀರ್ಪು ಕೊಡ್ತಾರೆ. ಮಂಡ್ಯಗೆ ಕಾರ್ಖಾನೆ ತರಲಿಲ್ಲ, ಜಮೀನು ಕೊಡ್ತಿವಿ ಅಂತಾರೆ. ಒಬ್ಬ ಎಂಎಲ್‌ಎ ಜಮೀನು ಕೊಡಲು ಆಗುತ್ತಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ.
ನನಗೆ ಐದನೇ ಬಾರಿ ಭಗವಂತ ಲೈಫ್ ಕೊಟ್ಟಿದ್ದಾನೆ. ಕಡೆಯ ಬಾರಿ ರಾಜ್ಯದ ಜನ ಒಂದು ಅವಕಾಶ ಕೊಡಲಿ. ಕೇಂದ್ರ ಸರ್ಕಾರ, ಯಾವ ಸರ್ಕಾರಗಳ ಆರ್ಥಿಕ ನೆರವು ಬೇಕಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ನನಗೆ ಅನುಭವವಿದೆ. ಖಜಾನೆ ಖಾಲಿ ಮಾಡುವುದು ಬೇಕಾಗಿಲ್ಲ, ಅಭಿವೃದ್ಧಿ ಮಾಡಬಹುದು. ನಾವು ಶ್ವೇಚ್ಛಾಚಾರವಾಗಿ ಖಜಾನೆ ಹಣ ಖರ್ಚು ಮಾಡುತ್ತಿದ್ದೇವೆ. ಭಿಕ್ಷೆ ಕೊಡ್ರಪ್ಪಾ, ಒಂದು ಮತ ಹಾಕಿ ಎಂದು ಬೇಡಿಕೊಂಡೆ. ಜನ ನಮಗೆ ಮತ ಹಾಕಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಹಿಂದ ಬಗ್ಗೆ ಸಿದ್ದರಾಮಯ್ಯ ಕೊಡುಗೆ ಏನು ಹೇಳಲಿ. ಇದನ್ನ ಅವರ ರಾಜಕೀಯ ಬದುಕಿಗೆ ಇಟ್ಟುಕೊಂಡಿದ್ದಾರೆ. ಅಹಿಂದ ಜನರ ಬದುಕಿಗೆ ಏನೂ ಇಲ್ಲ. ಎತ್ತಿನಹೊಳೆ ಯೋಜನೆ ಶುರುವಾಗಿ ಎಷ್ಟು ವರ್ಷ ಆಯ್ತು? ಎಷ್ಟು ಹಣ ಖರ್ಚಾಯ್ತು, ಎಷ್ಟು ನೀರು ಬಂತು ಎಂದು ಪ್ರಶ್ನೆ. ಇನ್ನು ಎಷ್ಟು ವರ್ಷ ಬೇಕು ನೀರು ಹರಿಯಲು ಎಂದು ಡಿಕೆಶಿಗೆ ಪ್ರಶ್ನಿಸಿದ್ದಾರೆ.

