ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ

1 Min Read

ಆನೇಕಲ್: ಪರಪ್ಪನ ಅಗ್ರಹಾರ (Parappana Agrahara) ಪೋಲಿಸ್ ಠಾಣೆಯಲ್ಲಿ ಮಹಿಳಾ ಪೇದೆಗೆ (Lady Constable) ಠಾಣೆಯ ಸಿಬ್ಬಂದಿ ಸೇರಿ ಸೀಮಂತ (Baby Shower) ಮಾಡಿದ್ದಾರೆ.

ತುಂಬು ಗರ್ಭಿಣಿಯಾಗಿದ್ದ ಉಮಾಗೆ ಠಾಣೆಯಲ್ಲೇ ಸೀಮಂತ ಮಾಡಿದ್ದು, ಠಾಣೆಯಲ್ಲಿನ ಸಿಬ್ಬಂದಿ ವರ್ಗ ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಠಾಣೆಯಲ್ಲಿ ನಡೆದ ಈ ಕಾರ್ಯಕ್ರಮ ಭಾವನಾತ್ಮಕವಾದ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ಸತೀಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಇದನ್ನೂ ಓದಿ: ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ

ಒಂದು ಕ್ಷಣ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಇದೇ ಸಂದರ್ಭದಲ್ಲಿ ಗರ್ಭಿಣಿ ಉಮಾ ಮಾತನಾಡಿ, ನನ್ನ ತವರು ಮನೆಯಿಂದ ಮಾಡುವ ಕಾರ್ಯಕ್ರಮವನ್ನು ನಾನು ಕೆಲಸ ಮಾಡುವ ಪೊಲೀಸ್ ಠಾಣೆಯಲ್ಲಿ ಮಾಡಿರುವುದು ಬಹಳ ಖುಷಿ ತಂದುಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಬ್ಬಬ್ಬಾ… ಏನ್‌ ಚಳಿ ಗುರು – ಬೆಂಗಳೂರಲ್ಲಿ 10 ವರ್ಷಗಳ ಬಳಿಕ ಕನಿಷ್ಠ ತಾಪಮಾನ

Share This Article