ಡೀಪ್ ಟೆಕ್ ಪ್ರಾಜೆಕ್ಟ್ ಸಲುವಾಗಿ ಕರ್ನಾಟಕದಲ್ಲಿ 786.43 ಕೋಟಿ ಹೂಡಿಕೆ: ಪ್ರಿಯಾಂಕ್‌ ಖರ್ಗೆ

2 Min Read

ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ನಡೆಯುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025ರ (Bengaluru Tech Summit 2025) 28ನೇ ಆವೃತ್ತಿಗೆ ಇಂದು ತೆರೆ ಬಿದ್ದಿದೆ.

ಮಾದವಾರ BIEC ಆವರಣದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ಟೆಕ್ ಶೃಂಗಸಭೆ ಅದ್ಧೂರಿಯಾಗಿ ತೆರೆ ಕಂಡಿದೆ. ಶೃಂಗಸಭೆಯಲ್ಲಿ 60 ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿದ್ದರು ಅನ್ನೋದು ಮತ್ತೊಂದು ವಿಶೇಷ. ಇದನ್ನೂ ಓದಿ: ಸ್ಪ್ಯಾಮ್‌ ಕರೆಗೆ ನಿಯಂತ್ರಣ – ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್‌

ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಇಂದು ಪ್ರಮುಖ ಕಾರ್ಯಕ್ರಮವಾಗಿ ಪ್ಯೂಚರ್ ಮೇಕರ್ಸ್ ಕಾನ್‌ಕ್ಲೈವ್‌ನಲ್ಲಿ 10 ಸಾವಿರ ಜನ ಸ್ಟಾರ್ಟ್ ಅಪ್‌ ಫೌಂಡರ್ಸ್‌ಗೆ ಸಾನಿಯಾ ಮಿರ್ಜಾ, ಶುಭಾಂಶು ಶುಕ್ಲಾ, ರಿಚಾ ಘೋಷ್ ಸೇರಿದಂತೆ ಹಲವರು ತಮ್ಮ ಜೀವನದ ಅನುಭವ ಹಂಚಿಕೊಂಡಿದ್ದು, ವಿಶೇಷವಾಗಿತ್ತು.

ಇಂದು ಮೂರನೇ ದಿನದ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge), ಡೀಪ್ ಟೆಕ್ ಪ್ರಾಜೆಕ್ಟ್ ಸಲುವಾಗಿ ಕರ್ನಾಟಕದಲ್ಲಿ 786.43 ಕೋಟಿ ಹೂಡಿಕೆ ಆಗಿದ್ದು, ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಈ ಸಾಧನೆ ಆಗಿದೆ. ಬೆಂಗಳೂರು ಟೆಕ್ ಸಮ್ಮಿಟ್‌ನಿಂದ ಕರ್ನಾಟಕದಲ್ಲಿ ಈ ಸಾಧನೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ತಂತ್ರಜ್ಞಾನ, ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳು: ಡಿ.ಕೆ. ಶಿವಕುಮಾರ್

Share This Article