21 ವರ್ಷದ ಬಳಿಕ ದೇಶಾದ್ಯಂತ ಎಸ್‌ಐಆರ್‌: ಚುನಾವಣಾ ಆಯೋಗ

1 Min Read

– ಎರಡನೇ ಹಂತದಲ್ಲಿ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ
– ಕರ್ನಾಟಕದಲ್ಲಿ ಈ ಬಾರಿ ಎಸ್‌ಐಆರ್‌ ಇಲ್ಲ

ನವದೆಹಲಿ: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

- Advertisement -

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಬಿಹಾರದಲ್ಲಿ ನಡೆಸಿದ SIR ಯಶಸ್ವಿಯಾಗಿದೆ. ಈಗ ಎರಡನೇ ಹಂತದಲ್ಲಿ ಮುಂದೆ 1-2 ವರ್ಷದ ಒಳಗಡೆ ಚುನಾವಣೆ ನಡೆಯಲಿರುವ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಶುರುವಾಗಲಿದೆ ಎಂದು ತಿಳಿಸಿದರು.

- Advertisement -

ಆಯೋಗದ ಕಾನೂನಿನ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಪರಿಷ್ಕರಣೆ ನಡೆಸದ ಬಗ್ಗೆ ದೂರು ನೀಡಿವೆ. ಇಲ್ಲಿಯವರಗೆ ಎಂಟು ಬಾರಿ SIR ನಡೆಸಿದೆ. 2002-2004 ರಲ್ಲಿ ಕೊನೆಯದಾಗಿ SIR ನಡೆಸಲಾಗಿತ್ತು. ಎರಡು ದಶಕದ ಬಳಿಕ ಈಗ SIR ಮಾಡಲಾಗುತ್ತಿದೆ ಎಂದು ತಿಳಿಸಿದರು.

- Advertisement -

ಕಳೆದ 20 ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಕಷ್ಟು ಮತದಾರರ ವಿಳಾಸ ಬದಲಾವಣೆಯಾಗಿರುತ್ತದೆ, ವಿದೇಶಿಗರು ಪಟ್ಟಿಯಲ್ಲಿ ಸೇರಿರುತ್ತಾರೆ. ಕೆಲವರು ಮರಣದ ಬಳಿಕವೂ ಪಟ್ಟಿಯಲ್ಲಿ ಹೆಸರು ಉಳಿದುಕೊಂಡಿರುತ್ತದೆ. ಇದನ್ನು ತೆರವು ಮಾಡಲು SIR ಅಗತ್ಯವಿದೆ ಎಂದು ಆಯೋಗದ ನಿರ್ಧಾರವನ್ನು ಸಮರ್ಥಿಸಿಕೊಂಡರು.

- Advertisement -

ಎಲ್ಲೆಲ್ಲಿ ಎಸ್‌ಐಆರ್‌?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗೋವಾ, ಪುದುಚೇರಿ, ಛತ್ತೀಸ್‌ಗಢ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಲಕ್ಷದ್ವೀಪ.

Share This Article