ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ: ಜಾಲಿವುಡ್ ಆಡಳಿತ ಮಂಡಳಿ

Public TV
1 Min Read

ರಾಮನಗರ: ಮಾಲಿನ್ಯ ನಿಯಮ ಉಲ್ಲಂಘಿಸಿದ್ದಕ್ಕೆ ಬಿಗ್‌ಬಾಸ್‌ (Bigg Boss) ಮನೆಗೆ ಬೀಗ ಜಡಿದ ಬೆನ್ನಲ್ಲೇ ರಾಮನಗರ ಡಿಸಿ (Ramanagar DC Office) ಕಚೇರಿಗೆ ಜಾಲಿವುಡ್ (Jollywood) ಆಡಳಿತ ಮಂಡಳಿ ಭೇಟಿ ನೀಡಿದ್ದು, 15 ದಿನ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದೆ.

ಜಾಲಿವುಡ್ ಸ್ಟುಡಿಯೋದಲ್ಲಿ ಬಿಗ್‌ಬಾಸ್ ಸೀಸನ್ 12ರ ಶೋ ನಡೆಯುತ್ತಿದ್ದು, ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಹೀಗೆ ಏಕಾಏಕಿ ಬಂದ್ ಮಾಡಿದರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬೀಳಲಿದೆ. ನಮ್ಮಿಂದ ತಪ್ಪಾಗಿದೆ, ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಜಾಲಿವುಡ್ ಆಡಳಿತ ಮಂಡಳಿ ಡಿಸಿ ಬಳಿ ಪರಿಪರಿಯಾಗಿ ಬೇಡಿಕೊಂಡಿದೆ.ಇದನ್ನೂ ಓದಿ:Bigg Boss | ಉಲ್ಲಂಘನೆಯಾಗಿದ್ರೆ ಸರಿ ಮಾಡಲು ಅವಕಾಶ ಕೊಡಿ: ಡಿಕೆಶಿ ಸಾಫ್ಟ್‌ ಕಾರ್ನರ್‌

ಸದ್ಯ ಜಾಲಿವುಡ್ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸುತ್ತಿದೆ. ಮಾತುಕತೆ ಫಲಪ್ರದವಾದರೆ ಜಿಲ್ಲಾಧಿಕಾರಿಯವರು ಷರತ್ತು ಬದ್ಧ ಅನುಮತಿ ನೀಡಿದರೆ ಇಂದೇ ಜಾಲಿವುಡ್ ಸ್ಟುಡಿಯೋ ಓಪನ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಕಾರಣ ಅವರಿಗೆ ಷರತ್ತುಗಳನ್ನು ವಿಧಿಸಿ ಬೀಗ ತೆಗೆಸಲು ಅಧಿಕಾರವಿದೆ.

Share This Article