ಡ್ರೈವರ್‌ ಬಾಬು ಆತ್ಮಹತ್ಯೆ ಕೇಸ್‌ – ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ FIR

Public TV
1 Min Read

ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ (Congress Vs BJP) ನಡುವೆ ರಾಜಕೀಯ ಜಟಾಪಟಿ ಜೋರಾಗಿದೆ.

ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ (Dr. K Sudhakar) ಬೆಂಬಲಿಗರ ನಡುವೆ ಫೋಸ್ಟರ್ ವಾರ್ ನಡೆದಿತ್ತು. ಇದೀಗ ಘಟನೆ ಸಂಬಂಧಿಸಿದಂತೆ ಸಂಸದ ಸುಧಾಕರ್ ಬೆಂಬಲಿಗ, ಮುನಿರಾಜು ಎಂಬಾತ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಶಾಸಕ ಪ್ರದೀಪ್‌ ಈಶ್ವರ್‌ ಬೆಂಬಲಿಗರ ವಿರುದ್ಧ ಆಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಂಸದ ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್‌ – ಮೃತ ಬಾಬು ಮನೆಗೆ ಪ್ರದೀಪ್‌ ಈಶ್ವರ್‌ ಭೇಟಿ

ಸುಧಾಕರ್ ಬೆಂಬಲಿಗರ ವಿರುದ್ಧವೂ ಪ್ರತಿದೂರು
ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಇತ್ತ ಸಂಸದ ಸುಧಾಕರ್ ಬೆಂಬಲಿಗರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸಂಸದ ಸುಧಾಕರ್ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಗಜೇಂದ್ರ ಆತನ ಸಹೋದರ ರವಿ, ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

ಪ್ರದೀಪ್ ಈಶ್ವರ್ ಬೆಂಬಲಿಗ ಮೊಹಮ್ಮದ್‌ ಹಮೀಮ್ ಎಂಬಾತ ಹಲ್ಲೆ ಮಾಡಿ ಪ್ರಾಣ ಬೆದರಕೆ ಹಾಕಿರುವುದಾಗಿ ದೂರು ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎರಡು ಕಡೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ. ಇದನ್ನೂ ಓದಿ: ವಿಪಕ್ಷದ ನಾಯಕರಿಗೆ ಕಿರುಕುಳ ನೀಡಲು ಪೊಲೀಸರ ಬಳಕೆ, ಸಂಸದ ಸುಧಾಕರ್‌ ಗುರಿಯಾಗಿಸಿ FIR: ಆರ್‌.ಅಶೋಕ್‌ ಕಿಡಿ

Share This Article