3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್

Public TV
0 Min Read

ಬೆಂಗಳೂರು: ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪದಡಿ ನಟ ಧ್ರುವ ಸರ್ಜಾ (Dhruva Sarja) ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಹೆಗ್ಗಡೆ ಎಂಬುವವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧೃವ ಸರ್ಜಾ ವಿರುದ್ಧ ಎಫ್‌ಐಆರ್

ಧ್ರುವ ಸರ್ಜಾ ಹಾಗೂ ರಾಘವೇಂದ್ರ ಹೆಗ್ಡೆ 2016ರಿಂದ 2018ರವರೆಗೆ ಜೊತೆಗೆ ಕೆಲಸ ಮಾಡಿದ್ದರು. ಧ್ರುವ ಸರ್ಜಾ ಅವರೇ ರಾಘವೇಂದ್ರ ಹೆಗ್ಡೆ ಭೇಟಿ ಮಾಡಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸೋಲ್ಜರ್ ಎಂಬ ಸಿನಿಮಾ ಮಾಡುವುದಾಗಿ ಧ್ರುವ ಸರ್ಜಾ ಸ್ಕ್ರಿಪ್ಟ್ ಮಾಡಿದ್ದರು. ಆದರೆ ಧ್ರುವ ಸರ್ಜಾ ಒಪಂದಕ್ಕೆ ಸಹಿ ಹಾಕುವ ಮೊದಲೇ 3.15 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಮಂದಿರ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿಗೆ 3.15 ಕೋಟಿ ಸಾಲ ಪಡೆದು, ಧ್ರುವ ಒಡೆತನದ ಆರ್‌ಹೆಚ್ ಎಂಟರ್ಟೈನ್ಮೆಂಟ್‌ಗೆ ಹಣ ವರ್ಗಾವಣೆ ಮಾಡಿದ್ದರು. ಹಣ ಪಡೆದು ಅಪಾರ್ಟ್ಮೆಂಟ್ ಖರೀದಿ ಮಾಡಿರುವ ಧ್ರುವ ಸರ್ಜಾ, ಸಿನಿಮಾ ಮಾಡಿಕೊಡುವ ಭರವಸೆ ನೀಡಿದ್ದರು. 2019 ಫೆ.21ರಂದು ಒಪ್ಪಂದ ಆಗಿತ್ತು. ಆದರೆ ಈ ಹಣದ ವ್ಯವಹಾರವು ಒಪ್ಪಂದ ಮಾಡಿಕೊಳ್ಳುವ ಮುನ್ನವೇ ನಡೆದಿತ್ತು ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅಂಬೋಲಿ ಪೊಲೀಸರು ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

Share This Article