ಹಾಸನ: ಜಿಲ್ಲೆಯಲ್ಲಿ (Hassan) ಮಳೆಯ (Rain) ಅಬ್ಬರ ಮುಂದುವರೆದಿದ್ದು, ವರುಣನ ಆರ್ಭಟಕ್ಕೆ ವಾಟೆಹೊಳೆ ಡ್ಯಾಂ (Vatehole Dam) ಭರ್ತಿಯಾಗಿದೆ.
ವಾಟೆಹೊಳೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬರುತ್ತಿದ್ದು, ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಮೂರು ಕ್ರಸ್ಟ್ಗೇಟ್ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ. ಆಲೂರು ತಾಲ್ಲೂಕಿನ, ಚನ್ನೇನಹಳ್ಳಿ ಗ್ರಾಮದಲ್ಲಿರುವ ವಾಟೆಹೊಳೆ ಜಲಾಶಯ 1.51 ಟಿಎಂಸಿ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿ 1.414 ಟಿಎಂಸಿ ನೀರಿದೆ.
ವಾಟೆಹೊಳೆ ಡ್ಯಾಂನ ಗರಿಷ್ಠ ಮಟ್ಟ – 966.05 ಅಡಿ
ಇಂದಿನ ನೀರಿನ ಮಟ್ಟ – 965.55 ಅಡಿ
ಒಳಹರಿವು – 571.05 ಕ್ಯುಸೆಕ್
ಹೊರಹರಿವು – 792.01 ಕ್ಯುಸೆಕ್