ಏರ್‌ ಇಂಡಿಯಾ ಪೈಲಟ್ ‌ಹೃದಯಾಘಾತದಿಂದ ನಿಧನ

1 Min Read
ನವದೆಹಲಿ: ನಿಗದಿತ ವಿಶ್ರಾಂತಿಯಲ್ಲಿದ್ದ ಏರ್ ಇಂಡಿಯಾ ಪೈಲಟ್ (Air India Pilot) ಬುಧವಾರ ಬಾಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸುಮಾರು 40 ವರ್ಷ ವಯಸ್ಸಿನ ಪೈಲಟ್ ಮಂಗಳವಾರ ದೆಹಲಿಯಿಂದ ಬಾಲಿಗೆ ವಿಮಾನ ಹಾರಾಟ ನಡೆಸಿದ್ದರು ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೈಲಟ್‌ ಬಾಲಿಯಲ್ಲಿ ವಿಶ್ರಾಂತಿಯಲ್ಲಿದ್ದಾಗ ತಮ್ಮ ಹೋಟೆಲ್‌ನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಹೃದಯಾಘಾತವಾಗಿದೆ ಎಂದು ಪತ್ತೆಯಾಯಿತು. ವೈದ್ಯಕೀಯ ತಂಡದ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: West Bengal Election | ಕಮಲದ ಬಟನ್‌ ಮೇಲೆ ಟೇಪ್‌ – ಫಾಲ್ಟಾದಲ್ಲಿ ಮತದಾನ ಸ್ಥಗಿತ
ಬಾಲಿಯಲ್ಲಿ ತನ್ನ ಕಾಕ್‌ಪಿಟ್ ಸಿಬ್ಬಂದಿಯೊಬ್ಬರು ನಿಧನರಾದ ಬಗ್ಗೆ ಏರ್ ಇಂಡಿಯಾ ತೀವ್ರ ದುಃಖಿತವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆಯಷ್ಟೇ ಪೈಲಟ್ ನಿಯಂತ್ರಕ ಅವಶ್ಯಕತೆಗಳಿಗೆ ಅನುಗುಣವಾಗಿ ಎಲ್ಲಾ ಕಡ್ಡಾಯ ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದರು.
ವೈದ್ಯಕೀಯ ಪರೀಕ್ಷೆಯಲ್ಲಿ ಪೈಲಟ್‌ಗೆ ಯಾವುದೇ ಅನಾರೋಗ್ಯ ಸಮಸ್ಯೆ ಇರಲಿಲ್ಲ. ಪೈಲಟ್‌ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
Share This Article