ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು

By
2 Min Read

ಲಕ್ನೋ: ಮೀರತ್‌ನಲ್ಲಿ (Meerut) ಇತ್ತೀಚೆಗೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ರಹಸ್ಯವೊಂದು ಬೆಳಕಿಗೆ ಬಂದಿದೆ. ಇದು ಪತ್ನಿಯ ಕ್ರೂರ ಮನಸ್ಥಿತಿಯನ್ನು ಬಹಿರಂಗಪಡಿಸಿದೆ.

ಹೌದು… ಎರಡು ದಿನಗಳ ಹಿಂದೆಯಷ್ಟೇ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ (Saurabh Rajput) ಅವರ ಪತ್ನಿ ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆಗೆ ಸೇರಿ ಪತ್ನಿಯನ್ನ ಹತ್ಯೆ ಮಾಡಿದ್ದಳು. ದೇಹವನ್ನು ಪೀಸ್ ಪೀಸ್ ಮಾಡಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದಳು. ನಿನ್ನೆಯಷ್ಟೇ ಪ್ರಿಯಕರನೊಂದಿಗೆ ಸೇರಿ ಶವ ಸಾಗಿಸುತ್ತಿದ್ದ ಸಿಸಿಟಿವಿ (CCTV) ದೃಶ್ಯಾವಳಿ ವೈರಲ್‌ ಆಗಿತ್ತು. ಇದೀಗ ಕೊಲೆಯ ಮತ್ತೊಂದು ರಹಸ್ಯ ಬಯಲಾಗಿದೆ. ಪತ್ನಿ ಮುಸ್ಕಾನ್‌, ಪತಿಯ ಹತ್ಯೆಗೈದು ತಲೆ ಕಡಿದಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಮೀರತ್‌ನ ಪೊಲೀಸ್‌ (Meerut Police) ಅಧಿಕಾರಿ ಚೌಧರಿ ಚರಣ್ ಸಿಂಗ್ ತಿಳಿಸಿದ್ದಾರೆ.

UP Murder

ಬುಧವಾರ ಇಬ್ಬರನ್ನೂ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇನ್ನೂ ಕೋರ್ಟ್‌ನಿಂದ ಕರೆದೊಯ್ಯುವ ವೇಳೆ ಇಬ್ಬರ ಮೇಲೆ ವಕೀಲರ ಗುಂಪೇ ಮುಸ್ಕಾನ್‌, ಸಾಹಿಲ್‌ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಸಂಗವೂ ನಡೆದಿತ್ತು.

ಕೊಲೆಗೆ ಕಾರಣ ಏನು?
ಮುಸ್ಕಾನ್‌, ಸಾಹಿಲ್‌ ಒಂದೇ ಶಾಲೆಯಲ್ಲಿ ಓದಿದ್ದರು. ತಮ್ಮ ಶಾಲೆಯ ವಾಟ್ಸಪ್‌ ಗ್ರೂಪ್‌ನಲ್ಲಿದ್ದ ಇವರು 2019ರಿಂದಲೂ ಪ್ರೀತಿಸಲು ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಮೀರತ್‌ನ ಮಾಲ್‌ನಲ್ಲಿ ನಡೆದ ಪಾರ್ಟಿ ವೇಳೆ ಭೇಟಿಯಾಗಿದ್ದರು. ಬಳಿಕ ಇಬ್ಬರ ಪ್ರೇಮ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಂಬಂಧಕ್ಕೆ ಸೌರಭ್‌ ಅಡ್ಡಿಯಾಗುತ್ತಾನೆಂದು ಮುಗಿಸುವ ಪ್ಲ್ಯಾನ್‌ ಮಾಡಿದರು. ಕೊಂದ ನಂತರ ಸ್ನಾನ ಕೊಠಡಿಗೆ ಅವನ ಮೃತದೇಹವನ್ನು ಎಳೆದೊಯ್ದು‌, ರೇಜರ್‌ನಿಂದ ತಲೆ ಕಡಿದಿದ್ದರು. ಕೈಗಳನ್ನು ಕಟ್ಟಿ ಹಾಕಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ಬಳಿಕ ಅದನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಡಬಲ್‌ ಬೆಡ್‌ಬಾಕ್ಸ್‌ನಲ್ಲಿಟ್ಟು ಅದರ ಮೇಲೆಯೇ ಪತ್ನಿ ನಿದ್ರೆ ಮಾಡಿದ್ದರು. ಅತ್ತ ಸಾಹಿಲ್‌ ಅವನ ಕೈಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ, ಬೆಡ್‌ರೂಮ್‌ನಲ್ಲಿಟ್ಟುಕೊಂಡಿದ್ದ.

ಮೊದಲು ಈ ತಿಂಗಳ ಆರಂಭದಲ್ಲಿ ತುಂಡು ಮಾಡಿದ ದೇಹವನ್ನು ನಗರದ ಹೊರ ಭಾಗದಲ್ಲಿ ಎಸೆಯುವ ಪ್ಲ್ಯಾನ್‌ ಮಾಡಿಕೊಂಡಿದ್ದರು. ಆದ್ರೆ ಅದು ಸಾಧ್ಯವಾಗಲಿಲ್ಲ. ಬಳಿಕ ಒಂದು ನೀಲಿ ಡ್ರಮ್‌, ಸಿಮೆಂಟ್‌ ತಂದು ಅದರೊಳಗೆ ಹಾಕಿ ಮುಚ್ಚಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ್ದು ಹೇಗೆ?
ಕೆಲ ದಿನಗಳ ಹಿಂದೆ ಸೌರಭ್‌ ತನ್ನ ತಾಯಿ ಮನೆಗೆ ಹೋಗಿದ್ದ. ಬರುವಾಗ ಒಂದಷ್ಟು ಖಾದ್ಯಗಳನ್ನೂ ತಂದಿದ್ದ. ಆದ್ರೆ ಮುಸ್ಕಾನ್‌ ಮತ್ತೆ ಆಹಾರವನ್ನು ಬಿಸಿ ಮಾಡುವಾಗ ಅದರಲ್ಲಿ ಮತ್ತು ಬರುವ ಔಷಧಿ ಬೆರಸಿದ್ದಳು. ಆ ಆಹಾರ ತಿನ್ನುತ್ತಿದ್ದಂತೆ ಸೌರಭ್‌ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ. ಬಳಿಕ ತನ್ನ ಪ್ರಿಯಕರ ಸಾಹಿಲ್‌ನನ್ನು ಕರೆದು ಇಬ್ಬರೂ ಸೇರಿ ಕೊಲೆ ಮಾಡಿದ್ರು. ಚಾಕುವಿನಿಂದ ಅನೇಕ ಬಾರಿ ಚ್ಚುಚ್ಚಿ, ಇರಿದು ಕೊಲೆ ಮಾಡಿದ್ದಾರೆ ಎಂದು ಎಸ್ಪಿ ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

Share This Article