ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

Public TV
1 Min Read

ಬಳ್ಳಾರಿ: ರಸ್ತೆಯ ಮಧ್ಯೆಯೇ ಇದ್ದಕ್ಕಿದ್ದಂತೆ ಮಹೀಂದ್ರಾ ಕಂಪನಿಯ ಥಾರ್‌ ಜೀಪ್‌ (Mahindra Thar) ಹೊತ್ತಿ ಉರಿದ ಘಟನೆ ಸಂಡೂರು (Sanduru) ತಾಲೂಕಿನ ಜೈಸಿಂಗ್‌ಪುರ ಬಳಿ ನಡೆದಿದೆ.

ತಾಳೂರು ಗ್ರಾಮದಿಂದ ಸಂಡೂರು ಕಡೆ ಪ್ರಯಾಣಿಸುತ್ತಿದ್ದಾಗ ಜೀಪ್‌ ಇದ್ದಕ್ಕಿದ್ದಂತೆ ಆಫ್ ಅಗಿದೆ. ಚಾಲಕ ಪ್ರಯತ್ನ ಪಟ್ಟರೂ ಸ್ಟಾರ್ಟ್‌ ಆಗಿರಲಿಲ್ಲ. ಈ ವೇಳೆ ಸುಟ್ಟ ವಾಸನೆ ಬರಲಾರಂಭಿಸಿದೆ. ಇದನ್ನೂ ಓದಿ: ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

ವಾಸನೆ ಬರುತ್ತಿದ್ದಂತೆ ಚಾಲಕ ಥಾರ್‌ನಿಂದ ಹೊರಗೆ ಇಳಿದಿದ್ದಾನೆ. ಕ್ಷಣ ಮಾತ್ರದಲ್ಲಿ ಥಾರ್‌ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಥಾರ್‌ ಹೊತ್ತಿ ಉರಿಯಲು ನಿಖರ ಕಾರಣ ತಿಳಿದು ಬಂದಿಲ್ಲ. ಕೆಲವೊಮ್ಮೆ ಕಂಪನಿ ನೀಡಿದ ಬಳಿಕವೂ ಗ್ರಾಹಕರು ತಮಗೆ ಬೇಕಾದಂತೆ ವಾಹನಗಳನ್ನು ವಿನ್ಯಾಸ ಮಾಡುತ್ತಾರೆ. ಈ ರೀತಿ ಕಸ್ಟಮೈಸ್ಡ್‌ ಮಾಡಿದ ನಂತರ ವಾಹನಗಳು ಬೆಂಕಿ ತುತ್ತಾಗಿರುವ ಹಲವಾರು ಘಟನೆಗಳು ನಡೆದಿವೆ.

 

Share This Article