ರಾಜ್ಯ ಹವಾಮಾನ ವರದಿ 14-03-2025

By
1 Min Read

ರಾಜ್ಯದಲ್ಲಿ ಬಿಸಿಲಿನ ಅಬ್ಬರ ಕಡಿಮೆಯಾಗಿದ್ದು, ಕೆಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಶುರುವಾಗಿದೆ.

ಇಂದು ರಾಜ್ಯದ ಹಲವೆಡೆ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ ಮೂರು ತಿಂಗಳು ವಾಡಿಕೆಗಿಂತ ಹೆಚ್ಚು ಬಿಸಿಲು ಅಬ್ಬರಿಸುವ ಸಾಧ್ಯತೆ ಇದೆ. ಈ ಮಧ್ಯೆ ಮಳೆಯೂ ಕೆಲವೊಮ್ಮೆ ತಂಪೆರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 31-26
ಶಿವಮೊಗ್ಗ: 36-22
ಬೆಳಗಾವಿ: 36-22
ಮೈಸೂರು: 37-22

ಮಂಡ್ಯ: 37-21
ಮಡಿಕೇರಿ: 35-21
ರಾಮನಗರ: 36-21
ಹಾಸನ: 34-20
ಚಾಮರಾಜನಗರ: 37-20
ಚಿಕ್ಕಬಳ್ಳಾಪುರ: 24-19

ಕೋಲಾರ: 33-19
ತುಮಕೂರು: 35-20
ಉಡುಪಿ: 31-26
ಕಾರವಾರ: 33-27
ಚಿಕ್ಕಮಗಳೂರು: 33-19
ದಾವಣಗೆರೆ: 36-23

ಹುಬ್ಬಳ್ಳಿ: 37-22
ಚಿತ್ರದುರ್ಗ: 36-22
ಹಾವೇರಿ: 37-23
ಬಳ್ಳಾರಿ: 38-24
ಗದಗ: 36-22
ಕೊಪ್ಪಳ: 37-23

ರಾಯಚೂರು: 39-26
ಯಾದಗಿರಿ: 38-25
ವಿಜಯಪುರ: 38-24
ಬೀದರ್: 38-23
ಕಲಬುರಗಿ: 38-26
ಬಾಗಲಕೋಟೆ: 38-24

 

Share This Article