ಅಭಿವೃದ್ಧಿ ಬಿಟ್ಟು ಬೇರೆ ಮಾತನಾಡಬೇಡಿ – ಡಿಕೆಶಿ, ಸಿದ್ದರಾಮಯ್ಯಗೆ ಖರ್ಗೆ ವಾರ್ನಿಂಗ್

Public TV
1 Min Read

– ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧವಾಗಿ ಹೋದ್ರೆ ನಮ್ಗೆ ತೊಂದ್ರೆ; ಎಐಸಿಸಿ ಅಧ್ಯಕ್ಷ

ಕಲಬುರಗಿ: ಸೀಟ್ ಫೈಟ್ ತೀವ್ರಗೊಂಡಿರುವ ಹೊತ್ತಲ್ಲೇ ಸಿಎಂ-ಡಿಸಿಎಂಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನೀಡಿರುವ ಸಂದೇಶ ಎಲ್ಲರ ಗಮನ ಸೆಳೆದಿದೆ.

ಸಿದ್ದರಾಮಯ್ಯ (Siddaramaiah) ಒಳ್ಳೆ ಬಜೆಟ್ ಕೊಟ್ಟಿದ್ದಾರೆ. ಡಿಕೆಶಿ ಕೂಡ ಪಕ್ಷ, ಸಂಘಟನೆ ಅಂತಾ ಒಳ್ಳೆ ಕೆಲಸ ಮಾಡಿದ್ದಾರೆ. ಹೀಗಾಗಿ ಇಬ್ರು ಒಟ್ಟಾಗಿ ಹೋಗ್ಬೇಕು. ಅಭಿವೃದ್ಧಿ ವಿಚಾರ ಬಿಟ್ಟು ಬೇರೆ ಮಾತಾಡಬಾರದು. ನೀವು ಪರಸ್ಪರ ವಿರುದ್ಧ ಹೋದ್ರೆ ಕಷ್ಟ ಆಗುತ್ತೆ ಎಂದು ಕೈಸನ್ನೇ ಮಾಡುತ್ತಾ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ರು. ಇದನ್ನೂ ಓದಿ: ಕೊಪ್ಪಳ | ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಗ್ಯಾಂಗ್ ರೇಪ್ – ಆರೋಪಿಗಳು ಅರೆಸ್ಟ್, ಓರ್ವ ನಾಪತ್ತೆ

ಖರ್ಗೆ ಮಾತನ್ನು ಕೇಳಿ ಕಲಬುರಗಿಯ ಕಲ್ಯಾಣ ಪಥ ವೇದಿಕೆಯಲ್ಲೇ ಇದ್ದ ಡಿಸಿಎಂ ಡಿಕೆ ಶಿವಕುಮಾರ್ ಸ್ಮೈಲ್‌ ಕೊಟ್ರು. ಇದನ್ನೂ ಓದಿ: ನಟಿ ರಶ್ಮಿಕಾಗೆ ಭದ್ರತೆ ಕೊಡಿ – ಅಮಿತ್‌ ಶಾ, ಪರಮೇಶ್ವರ್‌ಗೆ ಕೊಡವ ಸಂಘಟನೆಯಿಂದ ಪತ್ರ

ಇನ್ನೂ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ನಾನಾ ವಿಶ್ಲೇಷಣೆ ಕೇಳಿಬಂದಿವೆ. ಇದ್ರ ನಡ್ವೆ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂಬ ಕೂಗು ಮತ್ತೆ ಮತ್ತೆ ಕೇಳಿಬರತೊಡಗಿದೆ.. ಡಿಕೆ ಸಿಎಂ ಆಗಲ್ಲ ಎಂದು ಬಿಜೆಪಿಯವರು ಮಸಾಲೆ ಬೆರೆಸ್ತಿದ್ದಾರೆ. ಈ ಕುರಿತ ಪ್ರಶ್ನೆಗೆ, ಒಳ್ಳೆ ಕತೆಯಾಯ್ತು.. ನಡೀರಿ ಅಂತಾ ಡಿಸಿಎಂ ಹೇಳಿದ್ರು. ಈ ಮಧ್ಯೆ, ಸಂಸದ ಕಾರಜೋಳ ದಲಿತ ಸಿಎಂ ದಾಳ ಉರುಳಿಸಿದ್ರು. ಅತ್ತ, ಗುಜರಾತ್‌ನಲ್ಲಿ ಮಾತಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್‌ನಲ್ಲಿದ್ದೂ ಬಿಜೆಪಿಗೆ ಕೆಲಸ ಮಾಡ್ತಿರುವವರನ್ನು ಗುರುತಿಸಬೇಕಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಉಗ್ರ ಪೀಡಿತ ಪ್ರದೇಶದಿಂದ ನಾಪತ್ತೆಯಾಗಿದ್ದ ಬಾಲಕ ಸೇರಿ ಮೂವರ ಶವ ಪತ್ತೆ – ಭಯೋತ್ಪಾದಕ ಕೃತ್ಯ ಎಂದ ಬಿಜೆಪಿ

 

Share This Article