INDIA ಒಕ್ಕೂಟದಿಂದ ಕಾಂಗ್ರೆಸ್‌ ಉಚ್ಚಾಟಿಸಿ – ಆಪ್‌ ಬಂಡಾಯ!

Public TV
1 Min Read

ನವದೆಹಲಿ: INDIA ಒಕ್ಕೂಟದಲ್ಲಿ ಭಿನ್ನಮತ ಈಗ ತಾರಕಕ್ಕೇರಿದ್ದು ಕಾಂಗ್ರೆಸ್‌ ವಿರುದ್ಧ ಆಪ್‌ (AAP) ಬಂಡಾಯದ ಬಾವುಟ ಹಾರಿಸಿದೆ.

ಆಪ್ ನಾಯಕ ಅರವಿಂದ ಕೇಜ್ರಿವಾಲ್‌ (Arvind Kejriwal) ವಿರುದ್ಧ ಕಾಂಗ್ರೆಸ್‌ ನಾಯಕರು ನೀಡಿದ ಹೇಳಿಕೆಯಿಂದ ಆಪ್‌ ಕೆಂಡವಾಗಿದ್ದು INDIA ಒಕ್ಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಚಾಟನೆ ಮಾಡುವಂತೆ ಇತರ ಪಕ್ಷಗಳ ಜೊತೆ ಮನವಿ ಮಾಡಿದೆ ಎಂದು ವರದಿಯಾಗಿದೆ.


ದೆಹಲಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳಲು ಅರವಿಂದ್ ಕೇಜ್ರಿವಾಲ್ ಕಾರಣ. 2013 ರಲ್ಲಿ ಆಪ್‌ನ 40 ದಿನಗಳ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ದೆಹಲಿಯಲ್ಲಿ ದುರ್ಬಲವಾಗಿದೆ ಎಂದು ಅಜಯ್ ಮಾಕೇನ್ ಡಿ.25 ಎಂದು ಹೇಳಿಕೆ ನೀಡಿದ್ದರು.

ಅಜಯ್ ಮಾಕೆನ್ (Ajai Maken) ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಆಪ್ ಇಂಡಿಯಾ ಒಕ್ಕೂಟದಿಂದ ಕಾಂಗ್ರೆಸ್ ಉಚ್ಚಾಟನೆಗೆ ಬೇಡಿಕೆ ಇಟ್ಟಿದೆ. ಈ ವಿಚಾರದ ಬಗ್ಗೆ ಇಂದು ಅಧಿಕೃತವಾಗಿ ಆಪ್‌ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.

ಲೋಕಸಭಾ ಚುನಾವಣೆಯ ಬಳಿಕ ಆಪ್‌ ಮತ್ತು ಕಾಂಗ್ರೆಸ್‌ ಮಧ್ಯೆ ತಿಕ್ಕಾಟ ಜೋರಾಗಿದೆ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.

Share This Article