ವೈಟ್ ಹೌಸ್ AI ವಿಭಾಗದ ನೀತಿ ಸಲಹೆಗಾರನಾಗಿ ಭಾರತ ಮೂಲದ ಶ್ರೀರಾಮ್‌ ಕೃಷ್ಣನ್ ನೇಮಕ

Public TV
2 Min Read

ವಾಷಿಂಗ್ಟನ್‌: ಭಾರತ ಮೂಲದ ಉದ್ಯಮಿ ಹಾಗೂ ಲೇಖಕರೂ ಆಗಿರುವ ಶ್ರೀರಾಮ್‌ ಕೃಷ್ಣನ್ (Sriram Krishnan) ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ (Donald Trump) ಬಳಗ ಸೇರಿದ 3ನೇ ಭಾರತೀಯ ಶ್ರೀರಾಮ್‌ ಕೃಷ್ಣನ್ ಆಗಿದ್ದಾರೆ.

ಶ್ರೀರಾಮ್‌ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ (ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿ) ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಟ್ರಂಪ್‌ ಭಾನುವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Brazil | ಮನೆ, ಮಳಿಗೆಗಳಿಗೆ ಅಪ್ಪಳಿಸಿದ ಲಘು ವಿಮಾನ – ಎಲ್ಲಾ 10 ಮಂದಿ ಪ್ರಯಾಣಿಕರು ದುರ್ಮರಣ

ಶ್ರೀರಾಮ್‌ ಕೃಷ್ಣನ್ ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ಕ್ಯಾಪ್‌ನಲ್ಲಿ ಉತ್ಪನ್ನ (Product) ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇದೀಗ ವೈಟ್ ಹೌಸ್ AI ಮತ್ತು ಕ್ರಿಸ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ. ಇದನ್ನೂ ಓದಿ: ಬ್ರೆಜಿಲ್ | ಬಸ್ ಟೈರ್ ಸ್ಫೋಟಗೊಂಡು ಟ್ರಕ್‌ಗೆ ಡಿಕ್ಕಿ – 37 ಮಂದಿ ಬಲಿ

ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಕೃಷ್ಣನ್ ಹೇಳಿದ್ದಾರೆ.

ಶ್ರೀರಾಮ್‌ ಅವರ ನೇಮಕವನ್ನು ಅಮೆರಿಕದ ಭಾರತೀಯ ಸಮುದಾಯ ಸ್ವಾಗತಿಸಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮುಂದುವರಿದ ಹಿಂದೂ ದೇವಾಲಗಳ ಮೇಲಿನ ದಾಳಿ – 2 ದಿನಗಳಲ್ಲಿ 8 ವಿಗ್ರಹ ಧ್ವಂಸ

Share This Article