ತಾಜ್ ಎಕ್ಸ್‌ಪ್ರೆಸ್‌ನ 2 ಬೋಗಿಗಳಲ್ಲಿ ಬೆಂಕಿ- ಪ್ರಯಾಣಿಕರು ಸುರಕ್ಷಿತ

Public TV
1 Min Read

ನವದೆಹಲಿ: ತುಘಲಕಾಬಾದ್-ಓಖ್ಲಾ (Tughlakabad – Okhla) ನಡುವಿನ ತಾಜ್ ಎಕ್ಸ್‌ಪ್ರೆಸ್‌ನಲ್ಲಿ (Taj Express) ಇಂದು ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಒಟ್ಟು 6 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ ಎಂದು ರೈಲ್ವೆ ಡಿಸಿಪಿ ತಿಳಿಸಿದ್ದಾರೆ.

ತುಘಲಕಾಬಾದ್-ಓಖ್ಲಾ ನಡುವೆ ತಾಜ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳಿಗೆ ಬೆಂಕಿ ಕಾಣಿಸಿಕೊಂಡ ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುತ್ತಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ರೈಲ್ವೆ CPRO ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್

ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಪಿಸಿಆರ್ ಗೆ ಸಂಜೆ 4.41 ರ ಸುಮಾರಿಗೆ ಕರೆ ಬಂದಿತು. ತಾಜ್ ಎಕ್ಸ್ ಪ್ರೆಸ್ ರೈಲಿನ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ರೈಲನ್ನು ನಿಲ್ಲಿಸಲಾಗಿದೆ. ಪ್ರಯಾಣಿಕರು ಇತರ ಬೋಗಿಗಳಿಗೆ ತೆರಳಿ ಡಿಬೋರ್ಡಿಂಗ್ ಮಾಡಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಇದಲ್ಲದೆ ರೈಲ್ವೆಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Share This Article