ಕಾರಿಗೆ ಕಾದು ಸುಸ್ತು, ಪತ್ನಿ ಜೊತೆ ಆಟೋದಲ್ಲಿ ಶ್ರೀಮುರಳಿ ಸವಾರಿ

Public TV
1 Min Read

ಸ್ಯಾಂಡಲ್‌ವುಡ್ ನಟ ಶ್ರೀಮುರಳಿ (Sriimurali) ದಂಪತಿ ಕಾರ್ ಲೇಟ್ ಆಯ್ತು ಅಂತ ಆಟೋದಲ್ಲಿ ಮನೆಗೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಪತ್ನಿ ವಿದ್ಯಾ (Vidya Sriimurali) ಅವರು ನಗರದಲ್ಲಿ ಸೋಮವಾರ ಆಟೋ ಸವಾರಿ ಮಾಡಿದ್ದಾರೆ. ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ವಿನಯ್ ಗೌಡ ಬರ್ತ್‌ಡೇ ಪಾರ್ಟಿಯಲ್ಲಿ ಸೆಲೆಬ್ರಿಟಿಗಳ ದಂಡು

ಕಾರ್ ಬರೊದು ಲೇಟ್ ಆಗುತ್ತೆ ಅಂತ ಹಾಗೇ ಆಟೋಲೆ ಹೋಗೊಣ ಅನ್ಕೊಂಡ್ವಿ. ಆಟೋ ಸಿಗದೇ ನಡೆದು ನಡೆದು ಸಾಕಾಗಿತ್ತು (ನನ್ನ ಹೆಂಡತಿಗೆ ಕೋಪಾನು ಸ್ಟಾರ್ಟ್ ಆಗುತ್ತಿತ್ತು) ಆಗ ನನ್ನ ಆಪತ್ಭಾದವರಂತೇ ಇಬ್ಬರು ಹುಡುಗರು ನಮ್ಮನ್ನು ನೋಡಿ ಸಾಕಾಗಿ, ಆಟೋ ಹಿಡಿದು ನಮ್ಮ ಬಳಿ ತಂದರು. ಅವರಿಗೆ ಧನ್ಯವಾದ ಆಟೋ ಅಣ್ಣ ನಮ್ಮನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದರು ಎಂದು ನಟ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

 

View this post on Instagram

 

A post shared by SriiMurali (@sriimurali)

ಪರಾಕ್, ಬಘೀರ ಸಿನಿಮಾ ಕೆಲಸದಲ್ಲಿ ಶ್ರೀಮುರಳಿ ಬ್ಯುಸಿಯಾಗಿದ್ದಾರೆ. ಎರಡು ಸಿನಿಮಾದಲ್ಲೂ ಡಿಫರೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಶ್ರೀಮುರಳಿ ಬರಲಿದ್ದಾರೆ.

ಇತ್ತೀಚೆಗೆ ‘ಉಗ್ರಂ’ ಸಿನಿಮಾ 10 ವರ್ಷಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ‘ಉಗ್ರಂ’ ಪಾರ್ಟ್ 2 ಬರುವ ಬಗ್ಗೆ ಪ್ರಶಾಂತ್ ನೀಲ್ ಸುಳಿವು ನೀಡಿದ್ದಾರೆ. ಸದ್ಯ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

Share This Article