Ramayana: ಸಾಯಿ ಪಲ್ಲವಿ ಔಟ್, ಸೀತೆಯ ಪಾತ್ರದಲ್ಲಿ ಶ್ರೀದೇವಿ ಪುತ್ರಿ

Public TV
1 Min Read

ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ (Nitesh Tiwari) ಇದೀಗ ರಾಮಾಯಣ (Ramayana) ಆಧರಿಸಿ ಸಿನಿಮಾ ಮಾಡಲು ಸಕಲ ತಯಾರಿ ಮಾಡುತ್ತಿದ್ದಾರೆ. ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಸೆಲೆಕ್ಟ್ ಆಗಿದ್ರೆ, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈಗ ಸಾಯಿ ಪಲ್ಲವಿ ಬದಲು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ದಂಗಲ್, ಬಾವಲ್ ಚಿತ್ರಗಳ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಕುರಿತು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಪ್ರೀ- ಪ್ರೊಡಕ್ಷನ್ ಹಂತದ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ. ತೆರೆಮರೆಯಲ್ಲಿ ಪಾತ್ರಗಳ ಆಯ್ಕೆ ಕೂಡ ನಡೆಯುತ್ತಿದೆ. ಸೀತೆಯ ಪಾತ್ರದ ಆಯ್ಕೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ:ಪೂನಂ ಪರವಾಗಿ ಕ್ಷಮೆ ಕೇಳಿದ ಡಿಜಿಟೆಲ್ ಟೀಮ್

‘ರಾಮಾಯಣ’ ಸಿನಿಮಾ ಬಗ್ಗೆ ಒಂದಲ್ಲ ಒಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಣಬೀರ್ ರಾಮನ ಪಾತ್ರ ಮಾಡ್ತಾರೆ ಎನ್ನುವ ಸುದ್ದಿ ಹೊರಬಂದ ಬಳಿಕ ಸೀತೆಯಾಗಿ ಆಲಿಯಾ ಭಟ್ ಕಾಣಿಸಿಕೊಳ್ತಾರೆ ಎನ್ನಲಾಯ್ತು. ಆದರೆ ಡೇಟ್ ಸಮಸ್ಯೆಯಿಂದ ಆಲಿಯಾ ಈ ಸಿನಿಮಾವನ್ನು ಒಪ್ಪಿಕೊಳ್ಳಲಿಲ್ಲ. ಬಳಿಕ ಸೌತ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಸೀತೆಯ ಪಾತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಇದಾದ ಬಳಿಕ ಇದೀಗ ಶ್ರೀದೇವಿ ಮಗಳಿಗೆ ಸೀತೆಯಾಗುವ ಚಾನ್ಸ್ ಸಿಕ್ಕಿದೆ ಎನ್ನಲಾಗ್ತಿದೆ.

ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜಾನ್ವಿ ಇದೀಗ ‘ರಾಮಾಯಣ’ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ರಾ ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಅಪ್‌ಡೇಟ್ ಹೊರಬೀಳಲಿದೆ.

Share This Article