ಥಾಯ್ಲೆಂಡ್ ನಲ್ಲಿ ಕಾಣಿಸಿಕೊಂಡ ಪವಿತ್ರಾ ಲೋಕೇಶ್-ನರೇಶ್

By
1 Min Read

ತೆಲುಗಿನ ಖ್ಯಾತ ಹಿರಿಯ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಥಾಯ್ಲೆಂಡ್ (Thailand)ಗೆ ಹಾರಿದ್ದಾರೆ. ವಿದೇಶದಲ್ಲಿ ಎಂಜಾಯ್ ಮಾಡ್ತಿರೋ ಫೋಟೋವನ್ನು ಸ್ವತಃ ಲೋಕೇಶ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದು ಐವತ್ತು ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ತಮಗೆ ಸಹಾಯಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಅರ್ಪಿಸಿದ್ದಾರೆ.

ಸಹಜೀವನದಲ್ಲಿದ್ದೇವೆ

ನರೇಶ್ (Naresh) ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ನಡುವಿನ ಸಂಬಂಧವೇನು ಎನ್ನುವ ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಪರೋಕ್ಷವಾಗಿ ಅವರಿಬ್ಬರೂ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವಂತೆ ತೋರಿಸುತ್ತಲೇ ಬಂದರು. ಈ ಹಿಂದೆಯಷ್ಟೇ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗ ಪಡಿಸಿದ್ದಾರೆ. ತಮ್ಮ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅವರು, ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ನರೇಶ್, ‘ಸುಪ್ರೀಂಕೋರ್ಟ್ ಕೂಡ ಲೀವ್ ಇನ್ ರಿಲೇಶನ್ ಶಿಪ್ (Live in relationship) ಅನ್ನು ಮದುವೆಗೆ ಸಮ ಎಂದು ಹೇಳಿದೆ. ಹಾಗಾಗಿ ನಾವು ಸಹಜೀವನ ನಡೆಸುತ್ತಿದ್ದೇವೆ. ನಾನು ಸಿಂಗಲ್ ಆಗಿ ಇದ್ದೀನಿ ಅಂತ ಅಂದ್ಕೊಳ್ಳಬೇಡಿ. ನಾವಿಬ್ಬರೂ ಒಟ್ಟಿಗೆ ಇದ್ದೇವೆ. ಖುಷಿಯಾಗಿದ್ದೇವೆ’ ಎಂದು ಪವಿತ್ರಾ ಲೋಕೇಶ್ ಕೈ ಹಿಡಿದುಕೊಂಡೇ ಹೇಳಿದ್ದರು.

ಮದುವೆಯ (Marriage) ಕುರಿತಾಗಿಯೂ ಮಾತನಾಡಿದ ಅವರು, ‘ಬಹುಪತ್ನಿತ್ವ ತಪ್ಪು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗಂತ ಬಲವಂತವಾಗಿ ಯಾರೊಂದಿಗೂ ಬದುಕುವುದಕ್ಕೆ ಆಗುವುದಿಲ್ಲ. ಸಮಾಜಕ್ಕೆ ಹೆದರಿ ತುಂಬಾ ಜನ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಆದರೆ, ಅವರು ಯಾರೂ ಸುಖವಾಗಿ ಇಲ್ಲ. ಕಿರುಕುಳದ ನಡುವೆಯೂ ಬದುಕು ನಡೆಸುವುದು ನನ್ನ ಮಟ್ಟಿಗೆ ತಪ್ಪು’ ಎಂದಿದ್ದರು ನರೇಶ್.

 

ಮುಂದುವರೆದು ಮಾತನಾಡಿದ್ದ ನರೇಶ್, ‘ತುಂಬಾ ಜನರು ನನಗೆ ಮದುವೆ ಆಗಿದ್ದೀರಾ ಎಂದು ಕೇಳುತ್ತಾರೆ. ಮದುವೆ ಅಂದರೆ ಏನು? ಉಂಗುರು ಬದಲಾಯಿಸಿಕೊಳ್ಳುವುದಾ ಅಥವಾ ತಾಳಿ ಕಟ್ಟುವುದಾ? ಇದೆಲ್ಲವೂ ಸಂಪ್ರದಾಯವಷ್ಟೇ. ಒಟ್ಟಿಗೆ ಖುಷಿಯಾಗಿ ಇರುವುದೇ ಮದುವೆ. ನಾವಿಬ್ಬರೂ ಆ ಅಡಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇಬ್ಬರೂ ನೆಮ್ಮದಿಯಾಗಿ ಇದ್ದೇವೆ’ ಎಂದಿದ್ದರು.

Share This Article