50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು – ರಾಗಾ ಬಗ್ಗೆ ಓವೈಸಿ ವ್ಯಂಗ್ಯ

Public TV
1 Min Read

ಹೈದರಾಬಾದ್‌: ನಿಮಗೆ ಈಗಾಗಲೇ 50 ವರ್ಷ ದಾಟಿದೆ. ಬಹುಶಃ ಒಂಟಿತನ ನಿಮ್ಮನ್ನು ಕಾಡುತ್ತಿರಬಹುದು ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ವ್ಯಂಗ್ಯವಾಡಿದ್ದಾರೆ.

ಓವೈಸಿ ಅವರು ಪ್ರಧಾನಿ ಮೋದಿ (Modi) ಅವರ ಮಾಜಿ ಸ್ನೇಹಿತ ಎನ್ನುವ ರಾಹುಲ್‌ ಗಾಂಧಿ (Rahul Gandhi) ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾವು ಯಾರ ನಿರ್ಧಾರಗಳನ್ನು ಪ್ರಶ್ನೆ ಮಾಡುವುದಿಲ್ಲ, ಯಾರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ಯಾರಿಗೂ ತೊಂದರೆ ಕೊಡುವುದಿಲ್ಲ. ನೀವೂ ಸಹ ನಿಮ್ಮನ್ನು ಚುಡಾಯಿಸಿದವರನ್ನು ಬಿಡಬೇಡಿ ಎಂದು ಹೇಳಿದ್ದಾರೆ.

ಇತ್ತೀಚೆಗೆ ತೆಲಂಗಾಣದಲ್ಲಿ ಚುನಾವಣಾ ಭಾಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್‌ ಗಾಂಧಿ ಮಾತನಾಡಿದ್ದರು. ಈ ವೇಳೆ ಆಡಳಿತರೂಢ ಭಾರತ್‌ ರಾಷ್ಟ್ರ ಸಮಿತಿ (BRS) ಸರ್ಕಾರವನ್ನು ಭ್ರಷ್ಟ ಸರ್ಕಾರ ಎಂದು ಕಿಡಿ ಕಾರಿದ್ದರು. ಅಲ್ಲದೇ ಪ್ರಧಾನಿ ಮೋದಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಮತ್ತು ಓವೈಸಿ ಇಬ್ಬರು ಸ್ನೇಹಿತರಿದ್ದಾರೆ ಎಂದು ನುಡಿದಿದ್ದರು. ಇದಕ್ಕೆ ಓವೈಸಿ ಪ್ರತಿಕ್ರಿಯಿಸಿದ್ದಾರೆ.

ಕೆಸಿಆರ್‌ ಮೋದಿ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ, ಅದೇ ರೀತಿ ಕೆಸಿಆರ್‌ ಮುಖ್ಯಮಂತ್ರಿ ಆಗಬೇಕೆಂದು ಮೋದಿ ಬಯಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಪಕ್ಷವು ತೆಲಂಗಾಣದಲ್ಲಿ ಮೋದಿ ತೇನೃತ್ವದ ಬಿಜೆಪಿ ಸರ್ಕಾರವನ್ನು ಸೋಲಿಸುವ ಉದ್ದೇಶ ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಗುಡುಗಿದ್ದರು. ಇದನ್ನೂ ಓದಿ: ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

ನವೆಂಬರ್ 30 ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ. ಛತ್ತೀಸ್‌ಗಢ, ಮಿಜೋರಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದೊಂದಿಗೆ ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ:  ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ

Share This Article